ಸೋಮವಾರ, ಏಪ್ರಿಲ್ 19, 2021
23 °C

ಸಾಯಿ ಗೋಲ್ಡ್ ಫ್ಯಾಷನ್ ಶೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ದಿನಾಚರಣೆ ಅಂಗವಾಗಿ ಆಭರಣ ಮತ್ತು ಸೀರೆಗಳ ಪ್ರತಿಷ್ಠಿತ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮತ್ತು ಸ್ಯಾರಿ ಪ್ಯಾಲೇಸ್ ಮಂಗಳವಾರ ಫ್ಯಾಷನ್ ಸ್ಪರ್ಧೆ ಆಯೋಜಿಸಿವೆ. 18 ರಿಂದ 25 ವರ್ಷದೊಳಗಿನ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮೊದಲ ಮೂರು ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.20 ಖ್ಯಾತ ಮಾಡೆಲ್‌ಗಳೂ ಸಹ ರ್ಯಾಂಪ್‌ನಲ್ಲಿ ಹೆಜ್ಜೆ ಹಾಕಲಿರುವುದು ಈ ಶೋ ವಿಶೇಷ. ಕಾಲ್ಗೆಜ್ಜೆ ಚಿತ್ರದ ನಾಯಕಿ ರೂಪಿಕಾ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮೆಹಂದಿ ಹಾಗೂ ಕೇಶ ವಿನ್ಯಾಸ ಸ್ಪರ್ಧೆಯೂ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಆದರೆ, ಮೊದಲೇ ಹೆಸರು ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ ಎಂದು ಸಾಯಿ ಗೋಲ್ಡ್ ಮಾಲೀಕ ಟಿ.ಎ. ಶರವಣ ತಿಳಿಸಿದ್ದಾರೆ.

ಸ್ಥಳ; ಸಾಯಿ ಪಾರ್ಟಿ ಹಾಲ್, ನಂ 41, ಡಿವಿಜಿ ರಸ್ತೆ, ಗಾಂಧಿ ಬಜಾರ್. ಬೆಳಿಗ್ಗೆ 11. ಮಾಹಿತಿ ಮತ್ತು ನೋಂದಣಿಗೆ: ದೀಪಾ ನಾಗೇಶ್ (74119 96915).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.