ಭಾನುವಾರ, ಏಪ್ರಿಲ್ 11, 2021
31 °C

ಸಾರವಾಡ: ಅಸ್ಪೃಶ್ಯತೆ ನಿವಾರಣೆಗೆ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಇನ್ನೂ ಅಸ್ಪೃಶ್ಯತೆ ಜಾರಿಯಲ್ಲಿದೆ. ದಲಿತರಿಗೆ ಬಾವಿ ಯಿಂದ ನೇರವಾಗಿ ನೀರು ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಜಿತೇಂದ್ರ ಕಾಂಬಳೆ ದೂರಿದ್ದಾರೆ.ದಲಿತರು ನೀರು ಬೇಕಿದ್ದರೆ ಬಾವಿ ಹತ್ತಿರ ಖಾಲಿ ಕೊಡಗಳನ್ನು ಇಡಬೇಕು. ಮೇಲ್ವರ್ಗದವರು ಬಂದು ಬಾವಿ ಯಿಂದ ನೀರು ತೆಗೆದು ದಲಿತರ ಕೊಡಕ್ಕೆ ಹಾಕಿದರೆ ಮಾತ್ರ ಅವರಿಗೆ ನೀರು ಸಿಗುತ್ತದೆ ಎಂದು ದೂರಿರುವ ಅವರು, ಭಯದ ವಾತಾವರಣದಲ್ಲಿ ಇರುವ ಸಾರವಾಡ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.ದಲಿತರ ಹಕ್ಕು ರಕ್ಷಿಸದಿದ್ದರೆ ಹೋರಾಟ ನಡೆಸುವುದಾಗಿ ಜಿತೇಂದ್ರ ಕಾಂಬಳೆ, ಧೂಳೇಶ ಆಕಾಶಿ, ಶ್ರೀಶೈಲ ಉಪ್ಪಲದಿನ್ನಿ, ರಾಜಶೇಖರ ಕುಚಬಾಳ, ವೈ.ಎಸ್.ಮ್ಯಾಗೇರಿ, ಶಿವು ಬಿಜ್ಜೂರ, ಸದಾಶಿವ ಕಾಲೇಬಾಗ, ಆನಂದ ಶಿವಶರಣ, ರವಿಚಂದ್ರ ಪಾದಗಟ್ಟಿ, ಸಂಜೀವ ಕೊಂಡಗೂಳಿ, ದಶರಥ ಬನಸೋಡೆ ಇತರರು ಎಚ್ಚರಿಸಿದ್ದಾರೆ.ವಿಜಾಪುರದಲ್ಲಿ ಗುರುವಾರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ‘ಸಾರವಾಡ ಗ್ರಾಮದಲ್ಲಿ ಜಾರಿಯಲ್ಲಿರುವ ಅಸ್ಪೃಶ್ಯತೆಯನ್ನು ಎರಡು ದಿನಗಳಲ್ಲಿ ನಿವಾರಣೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.