ಬುಧವಾರ, ಅಕ್ಟೋಬರ್ 23, 2019
22 °C

ಸಾರಸ್ವತ ಲೋಕದ ಹೆಮ್ಮೆಯ ಗರಿ ಕುವೆಂಪು

Published:
Updated:

ಮೈಸೂರು:  `ಕನ್ನಡ ಸಾರಸ್ವತ ಲೋಕಕ್ಕೆ ಶ್ರೇಷ್ಠ ಅಪ್ರತಿಮ ಕೃತಿಗಳನ್ನು ನೀಡಿ ಅದರ ಹೆಮ್ಮೆಯ ಗರಿಯಂತಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ವಿದ್ಯಾರ್ಥಿ ಗಳಾದ ನಾವು ಅವರ ಕೃತಿಗಳನ್ನು ಓದುವ ಮೂಲಕ , ವಿಮರ್ಶಿಸುವ ಮೂಲಕ ಅವರ ಕೃತಿಗಳಲ್ಲಿನ ರಸಾನುಭವವನ್ನು ಅನುಭವಿಸುವ ಮೂಲಕ ಅವರಿಗೆ ನಮನ ಸಲ್ಲಿಸಬೇಕು~ ಎಂದು ಪ್ರಾಂಶುಪಾಲರಾದ ಪ್ರೊ. ವೈ.ಎಸ್.ಗೌರಮ್ಮ ತಿಳಿಸಿದರು.ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಗುರುವಾರ ನಡೆದ ರಾಷ್ಟ್ರಕವಿ ಕುವೆಂಪು ಅವರ 107ನೇ ಜಯಂತ್ಯುತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ  ಮಾತನಾಡಿದ ಅವರು `ಕುವೆಂಪು ಅವರ ವೈಚಾರಿಕ ಮನೋಭಾವವನ್ನು, ಪಾರಂಪರಿಕ ತತ್ವಗ್ರಹಿಕೆಯನ್ನು, ವಿಮರ್ಶಾತ್ಮಕ ಗುಣವನ್ನು, ಕೃತಿಗಳ ಮೂಲಕ ಆಸ್ವಾದಿಸುವುದು ನಮ್ಮ ಗುರಿಯಾಗ ಬೇಕು~ ಎಂದು ಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ `ಮಹಾಕವಿ ಕುವೆಂಪು ತಮ್ಮ ಕವಿತೆಗಳ ಮೂಲಕ ಪ್ರೀತಿ, ಸ್ನೇಹ, ವಿಶ್ವಾಸವನ್ನು ಮಾನವ ಹೃದಯಗಳಲ್ಲಿ ಬಿತ್ತುವಂತಹ ಕೃಷಿ ಮಾಡಿದ್ದಾರೆ ಹಾಗೂ `ವಿಶ್ವಮಾನವ ಪ್ರಜ್ಞೆ~ ಎಲ್ಲೆಡೆ ಹಬ್ಬಲು ತಮ್ಮದೇ ರೀತಿಯಲ್ಲಿ ಮಾನವತೆಯ ದೀಕ್ಷೆಗೆ ಒತ್ತು ನೀಡಿದ್ದಾರೆ~ ಎಂದರು.ಅಧ್ಯಾಪಕ ಡಾ.ಷಹಸೀನ ಬೇಗಂ ಮಾತನಾಡಿ, `ಕುವೆಂಪು ಜಗತ್ತಿನ ಅಭೂತಪೂರ್ವ ವಿಶಿಷ್ಟ ಕವಿ ಎಂಬುದು ಕನ್ನಡಿಗರ, ಭಾರತೀಯರ ಹೆಮ್ಮೆಯ ಸಂಗತಿ~ ಎಂದು ತಿಳಿಸಿದರು.ಕುವೆಂಪು ಜಯಂತಿ ಅಂಗವಾಗಿ ಕಾಲೇಜು ಮುಂಭಾಗದ ಪಾರ್ಕಿನಲ್ಲಿ ಪ್ರಾಧ್ಯಾಪಕ ಡಾ.ಟಿ. ಕೃಷ್ಣೇಗೌಡ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಸಿ.ಡಿ.ಪರಶು ರಾಮ, ಆನಂದಕುಮಾರ್, ಡಿ.ಕೆ.ಮಂಜುನಾಥ್, ಅಧೀಕ್ಷಕ ರಾದ ಎಸ್.ಸಂಪತ್, ರೂಪೇಶ್ ಎಂ.ಸಿ, ಅಶ್ವಿನಿ ವಿ., ಯೋಗೇಶ್, ನ.ಮಹದೇವು, ಕೃಷ್ಣ, ಕುಮಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  ಮಲ್ಲಿಕಾರ್ಜುನ ವಂದಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)