ಶನಿವಾರ, ಏಪ್ರಿಲ್ 17, 2021
30 °C

ಸಾರಿಗೆ ನಿಗಮದ ಅಧಿಕಾರಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗ ಹಡಗಲಿ ಘಟಕದ ವ್ಯವಸ್ಥಾಪಕ ಜಿ.ಆರ್. ದಯಾನಂದ ಅವರನ್ನು ಕರ್ತವ್ಯ ಲೋಪ ಕಾರಣ ಗುರುವಾರ ಅಮಾನತು ಮಾಡಲಾಗಿದೆ.ಹೊಸಪೇಟೆ ವಿಭಾಗದ ಪ್ರಗತಿ ಪರಿಶೀಲನೆಗೆ ತೆರಳಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಅವರು ಕರ್ತವ್ಯದ ಬಗ್ಗೆ ದಯಾನಂದರ ನಿಷ್ಕಾಳಜಿ ಹಾಗೂ ಆಗಾಗ್ಗೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗುತ್ತಿರುವುದನ್ನು ಗಮನಿಸಿ ಸೇವೆಯಿಂದ ಅಮಾನತು ಮಾಡಿದ್ದಾಗಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.