ಸಾರಿಗೆ ಸಂಸ್ಥೆಗೆ ನಿತ್ಯ ರೂ 1 ಕೋಟಿ ಖೋತಾ

7

ಸಾರಿಗೆ ಸಂಸ್ಥೆಗೆ ನಿತ್ಯ ರೂ 1 ಕೋಟಿ ಖೋತಾ

Published:
Updated:

ಬೆಂಗಳೂರು: ಕಾವೇರಿ ಚಳವಳಿ ಕಾರಣ ಬೆಂಗಳೂರು - ಮೈಸೂರು ಮಾರ್ಗದಲ್ಲಿನ ಬಸ್ ಸಂಚಾರಕ್ಕೆ ವ್ಯತ್ಯಯವಾಗಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಆದಾಯದಲ್ಲಿ ನಿತ್ಯ ಒಂದು ಕೋಟಿ ರೂಪಾಯಿ ಖೋತಾ ಆಗುತ್ತಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ ತಿಳಿಸಿದರು.ಮಂಡ್ಯ, ಮೈಸೂರು ಭಾಗದಲ್ಲಿ ಹೋರಾಟ ಶುರುವಾಗಿ ಸೋಮವಾರಕ್ಕೆ ಒಂಬತ್ತು ದಿನಗಳಾಗಿವೆ. ದಿನಕ್ಕೆ ಒಂದು ಕೋಟಿ ರೂಪಾಯಿ ಪ್ರಕಾರ ಇದುವರೆಗೆ ಒಂಬತ್ತು ಕೋಟಿ ರೂಪಾಯಿ ಖೋತಾ ಆಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಬೆಂಗಳೂರಿನಿಂದ ಮೈಸೂರಿಗೆ ಬದಲಿ ಮಾರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರಯಾಣಿಕರು ಇಲ್ಲದ ಕಾರಣ ನಷ್ಟ ಅನುಭವಿಸುವಂತಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ   ಎನ್.ಮಂಜುನಾಥ ಪ್ರಸಾದ್ `ಪ್ರಜಾವಾಣಿ~ಗೆ ತಿಳಿಸಿದರು.

ಕಳೆದ ತಿಂಗಳ 20 ಮತ್ತು ಈ ತಿಂಗಳ 6ರಂದು ನಡೆದ ಬಂದ್‌ನಿಂದಾಗಿ ನಿಗಮದ ಆದಾಯದಲ್ಲಿ ಒಟ್ಟು 10 ಕೋಟಿ ರೂಪಾಯಿ ಖೋತಾ ಆಗಿದೆ ಎಂದು ಹೇಳಿದರು.ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ಬಂದರೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಎಲ್ಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅಶೋಕ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry