ಸೋಮವಾರ, ಏಪ್ರಿಲ್ 19, 2021
32 °C

ಸಾರಿಗೆ ಸಂಸ್ಥೆ ಕಚೇರಿ ಮುಂದೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ ನಗರದ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಆರಂಭಿಸಿದರು.ಪ್ರತಿಭಟನಾಕಾರರು ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಸಂಸ್ಥೆಯ ವಿಭಾಗೀಯ ಕಚೇರಿಯವರೆಗೆ ತೆರಳಿ ಧರಣಿ ನಡೆಸಿದರು.ಗದಗ ಜಿಲ್ಲೆ ರಚನೆಯಾಗಿ 15 ವರ್ಷ ಕಳೆದರೂ ಸಂಸ್ಥೆಯ ಹೈಟೆಕ್ ಬಸ್‌ನ ಸೌಲಭ್ಯವಿಲ್ಲ. ಸಾರಿಗೆ ಸಚಿವರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಪಡೆದ ಪಾಸ್‌ಗಳಿಗೆ ತುಂಬಿದ ಒಟ್ಟು ಹಣದಲ್ಲಿ ರಿಯಾಯಿತಿ ನೀಡಿ ಹಣ ಮರಳಿ ನೀಡಿಲ್ಲ. ಸಂಸ್ಥೆಯ ಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದ ಕಾರ್ಮಿಕರಿಗೆ ದೊರಕುವ ಸರ್ಕಾರಿ ಸವಲತ್ತುಗಳನ್ನು ನೀಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.ಸಂಸ್ಥೆಯ ನಿವೃತ್ತ ನೌಕರರಿಗೆ ರಾಜ್ಯಾದ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯ ಜಾರಿಗೊಳಿಸಬೇಕು. ಗ್ರಾಮಾಂತರ ಪ್ರದೇಶಗಳಿಗೆ ಹೊಸ ಬಸ್‌ಗಳನ್ನು ಓಡಿಸಲು ಬಿಡಬೇಕು. ಸಂಸ್ಥೆಯ ಕಾರ್ಮಿಕರ ಮೇಲೆ ನಡೆಯುವ ಶೋಷಣೆ ತಡೆಗಟ್ಟಲು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಧರಣಿ ಸತ್ಯಾಗ್ರಹದಲ್ಲಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ನಿಸಾರ್ ಅಹ್ಮದ್ ಖಾಜಿ, ಅಯ್ಯಪ್ಪ ನಾಯ್ಕರ, ರವೀಂದ್ರ ಲಕ್ಕುಂಡಿ, ಕೆ.ಎಂ. ಸಯ್ಯದ್, ಎಸ್.ಜಿ. ಕೋತಂಬರಿ, ಎಸ್.ಎಂ. ಮರಿಗೌಡರ, ವೈ.ಎನ್. ಪಾಟೀಲ, ಅನಿಲ ಮೆಣಸಗಿ, ಐ.ಎ. ಬೇಪಾರಿ, ರಿಯಾಜ್‌ಅಹಮ್ಮದ್ ಈಟಿ, ಎಂ.ಎಸ್. ನಾಗರಕಟ್ಟಿ, ದಲಿತ ರಕ್ಷಣಾ ವೇದಿಕೆಯ ಪರಮೇಶ ಕಾಳೆ, ಎಂ.ಎಂ. ನಾಯ್ಕರ, ಇಮ್ತಿಯಾಜ್ ಮಾನ್ವಿ, ಜಾವೇದ್ ನೂರಭಾಷಾ, ಮುನ್ನಾ ರೇಶ್ಮಿ, ರವಿ ಬೆಳಮಕರ, ಸಿಜಿಬಿ ಹಿರೇಮಠ, ನಬೀಸಾಬ್ ಕೊರ್ಲಹಳ್ಳಿ ಮತ್ತಿತರರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.