`ಸಾರ್ಥಕ ಬದುಕಿನ ಮೌಲ್ಯ ತಿಳಿಯುವ ಯತ್ನ ಮಾಡಿ'

7

`ಸಾರ್ಥಕ ಬದುಕಿನ ಮೌಲ್ಯ ತಿಳಿಯುವ ಯತ್ನ ಮಾಡಿ'

Published:
Updated:

ಹಿರೇಕೆರೂರ: `ಮಕ್ಕಳನ್ನು ಮೊದಲು ದೊಡ್ಡ ಅಧಿಕಾರಗಳನ್ನಾಗಿ ಮಾಡಲು ಹವಣಿಸದೇ ಅವರಿಗೆ ಉತ್ತಮ ಸಂಸ್ಕೃತಿ, ನಿಜವಾದ ಸಂಸ್ಕಾರವನ್ನು ನೀಡಬೇಕು. ಧಾನ, ಧರ್ಮ, ಪುಣ್ಯದ ಕಾರ್ಯಗಳನ್ನು ಮಾಡುವುದರಿಂದ ಜೀವನ ಸಾರ್ಥಕವಾಗಲು ಸಾಧ್ಯವಿದ್ದು, ಸಾರ್ಥಕ ಬದುಕಿನ ಮೌಲ್ಯಗಳನ್ನು ತಿಳಿಯುವ ಯತ್ನ ಮಾಡಬೇಕು' ಎಂದು ಜಗಳೂರು ತಾಲ್ಲೂಕು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು. ಪಟ್ಟಣದ ವಿಠ್ಠಲ ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ನಡೆದ ಶಿಲಾಮೂರ್ತಿ ಪ್ರತಿಷ್ಠಾಪನೆಯ 4ನೇ ವಾರ್ಷಿಕೋತ್ಸವ ಹಾಗೂ ಧರ್ಮ ಸಭೆಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಅವರು, ಸಾಯಿಬಾಬಾರಂಥ ಮಹಾನ್ ಸಂತರಿಂದ ದೇಶಕ್ಕೆ ಸಾಕಷ್ಟು ಬೆಲೆ ಬಂದಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.ಬದುಕಿನಲ್ಲಿ ಸಾರ್ಥಕತೆ ಹೊಂದಲು ದೇವರ ದರ್ಶನ, ಧ್ಯಾನ ಮತ್ತು ಪೂಜೆಯನ್ನು ನಡೆಸಬೇಕು. ಮನಸ್ಸನ್ನು ವಿಕಾಸಗೊಳಿಸುವ ಚಟುವಟಿಕೆಗಳಲ್ಲಿ ತೊಡಗಬೇಕು. ಅವು ಕಷ್ಟದಲ್ಲಿ ನಮ್ಮ ನೆರವಿಗೆ ಬರುತ್ತವೆ. ಸಾಯಿಬಾಬಾ ತಮ್ಮ ಇಡೀ ಜೀವನವನ್ನೇ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟರು. ಆ ಮಹಾತ್ಮರನ್ನು ಸ್ಮರಿಸಲು ಪಟ್ಟಣದ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ಅಭಿವೃದ್ಧಿ ಸಮಿತಿ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಮಂದಿರ ಸಂಸ್ಥಾಪಕ ವೈ.ಡಿ. ಮಧೂರಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ಜೀವ ಕೋಟಿಯಲ್ಲಿ ಮಾನವ ಜನ್ಮ ಪವಿತ್ರವಾದದ್ದು, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಬಾಳಬೇಕು. ಶಿರಡಿ ಸಾಯಿಬಾಬಾರ ಮಹಿಮೆ ಸಾಕಷ್ಟು ಹಿರಿದಾದದು. ಕಾರಣ ಪ್ರತಿಯೊಬ್ಬರು ಶಿರಡಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಬೇಕು ಎಂದರು.ಈ ಸಂದರ್ಭದಲ್ಲಿ ಬಸವಣ್ಣೆಪ್ಪ ಕಿಚಡೇರ, ಸಿದ್ದಲಿಂಗೇಶ ಶೆಟ್ಟರ್, ಪಾಂಡುರಂಗ ನಾಡಿಗೇರ, ಭವರಲಾಲ್ ಜೈನ್, ಸುರೇಶ ವೈಶ್ಯರ, ಹನುಮಂತಪ್ಪ ದಿಂದೇರ, ದುರ್ಗಾರಾಮ ನಿಕ್ಕಂ, ಜ್ಞಾನೇಶ್ವರ ಹೋವಳೆ, ಸಿದ್ಲಿಂಗಪ್ಪ ಯಡಚಿ, ಮಾಲತೇಶ ಹೊಲಬಿಕೊಂಡ, ರಾಜು ಖಾಂಡ್ಕೆ, ರಾಮಚಂದ್ರಪ್ಪ ಹಮ್ಮಿಗಿ, ಬ್ರಿಜ್ ಮೋಹನ್ ಭುತಡಾ, ಮಾರುತಿ ಮಧೂರಕರ, ರಾಮಚಂದ್ರ ಮಧೂರಕರ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಹುಲ್ಲಿನಕೊಪ್ಪ ನಿರೂಪಿಸಿದರು. ಚಂದ್ರನಾಥ ಮಧೂರಕರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry