ಸಾರ್ವಜನಿಕರಿಂದ ತಹಶೀಲ್ದಾರ ಕಚೇರಿಗೆ ಮುತ್ತಿಗೆ

7

ಸಾರ್ವಜನಿಕರಿಂದ ತಹಶೀಲ್ದಾರ ಕಚೇರಿಗೆ ಮುತ್ತಿಗೆ

Published:
Updated:

ನವಲಗುಂದ: ಜನಗಣತಿ-2011ರ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅಡಿಯಲ್ಲಿ ಅ.1ರಿಂದ ಆರಂಭಿಸ ಲಾಗಿರುವ ಬಯೋ ಮೆಟ್ರಿಕ್ ನೋಂದಣಿ ಕಾರ್ಯಕ್ರಮ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು, ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆಯಿತು.`ಕೇವಲ ಎರಡೇ ದಿನದಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವುದಾದರೆ ಆರಂಭಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.  ಬೆಳಿಗ್ಗಿನಿಂದ ಕೆಲಸ ಬಿಟ್ಟು ತಾಸುಗಟ್ಟಲೆ ಸರದಿಗಾಗಿ ಕಾಯಬೇಕಾಗಿದೆ.ಕಂಪ್ಯೂಟರ್‌ಗಳು ಕಡಿಮೆ ಇರುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ. ಇದರಿಂದಾಗಿ ಎಲ್ಲರಿಗೂ ತೊಂದರೆಯಾಗಿದ್ದು ತಕ್ಷಣ ಹೆಚ್ಚಿನ ಕಂಪ್ಯೂಟರ್ ಒದಗಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಯೋಜನೆ ಆರಂಭಿಸಬೇಕು~ ಎಂದು ಸ್ಥಳೀಯರಾದ ಮಂಜು ಜಾದವ, ಶಾಂತು ಹೊಸಮನಿ, ಚೌಡಯ್ಯ ಗುಡಾರದ ಮತ್ತಿತರರು ತಹಶೀಲ್ದಾರ ಎಂ.ಬಿ. ಪಾಟೀಲ ಅವರನ್ನು ಒತ್ತಾಯಿಸಿದರು.ಅ.1ರಿಂದ ಈ ಪ್ರಕ್ರಿಯೆ ಆರಂಭವಾಗ್ದ್ದಿದು, ಸಾರ್ವ ಜನಿಕರು ನೊಂದಣಿ ಮಾಡಿಸಿಕೊಳ್ಳಲು ಮುಗಿ ಬ್ದ್ದಿದಿದ್ದರಿಂದ ಗದ್ದಲ ಉಂಟಾಗಿತ್ತು. ಕಂಪ್ಯೂಟರ್ ಆಪರೇಟರ್ ಗಳನ್ನು ಸಾರ್ವಜನಿಕರು ಅವಾಚ್ಯವಾಗಿ ನಿಂದಿಸಿದ್ದರಿಂದ ಮತ್ತು ಮಂಗಳವಾರ ರಾತ್ರಿವರೆಗೂ ಅವರನ್ನು ಕೂಡಿ ಹಾಕಿ ಕೆಲಸ ಮಾಡುವಂತೆ ಒತ್ತಾಯಿಸಿದ್ದರಿಂದ ಹೆದರಿದ ಕಂಪ್ಯೂಟರ್ ಆಪರೇಟರ್‌ಗಳು ಬುಧವಾರ ಕೆಲಸಕ್ಕೆ ಹಾಜರಾಗದೆ ಈ ವಿಷಯವನ್ನು ತಹಶೀಲ್ದಾರ ಗಮನಕ್ಕೆ ತಂದಿದ್ದರು.  ಸೂಕ್ತ ಭದ್ರತೆ ಮತ್ತು ಸಮಯ ನಿಗದಿಪಡಿಸಿದರೆ ಕೆಲಸ ಮಾಡುವುದಾಗಿ ತಿಳಿಸಿದ್ದರಿಂದ ಬುಧವಾರ ನೊಂದಣಿ ಕಾರ್ಯಕ್ರಮ ಸ್ಥಗಿತಗೊಂಡಿದೆ.ಈ ಕುರಿತು ತಹಶೀಲ್ದಾರ ಎಂ.ಬಿ. ಪಾಟೀಲ ಅವರನ್ನು ಸಂಪರ್ಕಿಸಿದಾಗ, ನವಲಗುಂದಕ್ಕೆ ಒಟ್ಟು 24 ಕಂಪ್ಯೂಟರ್‌ಗಳು ಬರಬೇಕಾಗಿತ್ತು. ಆದರೆ 16 ಮಾತ್ರ ಬಂದಿವೆ. ಹೀಗಾಗಿ ಸಮಸ್ಯೆಯಾಗಿದೆ. ಸಾರ್ವಜನಿಕರು ಆಪರೇಟರ್‌ಗಳ ಜೊತೆ ಅಸಭ್ಯವಾಗಿ ವರ್ತಿಸದೆ ತಾಳ್ಮೆಯಿಂದ ನೊಂದಣಿ ಮಾಡಿಸಿ ಕೊಳ್ಳಬೇಕು ಎಂದು ವಿನಂತಿಸಿದ್ದಾರೆ.ಕಂಪ್ಯೂಟರ್ ಆಪರೇಟರಗಳಿಗೂ ತಿಳುವಳಿಕೆ ನೀಡಲಾಗಿದ್ದು, ಗುರು ವಾರದಿಂದ ನೋಂದಣಿ ಪುನರಾಂಭಿಸ ಲಾಗುವುದು ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry