ಸಾರ್ವಜನಿಕರಿಗೆ ಒಳ್ಳೆ ಸೇವೆ ಒದಗಿಸಿ: ಮಂಗಳಾ

7

ಸಾರ್ವಜನಿಕರಿಗೆ ಒಳ್ಳೆ ಸೇವೆ ಒದಗಿಸಿ: ಮಂಗಳಾ

Published:
Updated:
ಸಾರ್ವಜನಿಕರಿಗೆ ಒಳ್ಳೆ ಸೇವೆ ಒದಗಿಸಿ: ಮಂಗಳಾ

ಕೆಜಿಎಫ್: ಕಾಳಸಂತೆಯಲ್ಲಿ ಸಿಗುವ ಸ್ಟ್ಯಾಂಪ್ ಪೇಪರ್ ಪಡೆದು ಕಷ್ಟಕ್ಕೆ ಸಿಲುಕಬಾರದು ಎಂದು ತಹಶೀಲ್ದಾರ್ ಮಂಗಳಾ ಸಲಹೆ ನೀಡಿದರು.ನಗರದ ಎನ್.ಟಿ.ಬ್ಲಾಕ್‌ನಲ್ಲಿ ಸ್ವರ್ಣಭೂಮಿ ಮಹಿಳಾ ವಿವಿಧೋದ್ಧೇಶ ಸಹಕಾರ ಸಂಘದ ವತಿಯಿಂದ ಶುಕ್ರವಾರ ಆರಂಭವಾದ ಇ-ಸ್ಟ್ಯಾಂಪಿಂಗ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಹಕಾರ ಸಂಘಗಳು ಸಾರ್ವಜನಿಕರಿಗೆ ಅನುಕೂಲವಾಗುವ ಇಂಥ ಸೇವೆ ಮಾಡಬೇಕು. ಇದರಿಂದ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.ಪ್ರಭಾರಿ ಡಿವೈಎಸ್ಪಿ ಪುಟ್ಟಮಾದಯ್ಯ ಮಾತನಾಡಿ, ಸಾರ್ವಜನಿಕರು ಯಾವುದೇ ರೀತಿಯ ಸ್ಟ್ಯಾಂಪ್ ಪೇಪರ್‌ಗಳಿಗಾಗಿ ಸರ್ಕಾರದ ಅಂಗೀಕೃತ ಇ-ಸ್ಟ್ಯಾಂಪಿಂಗ್ ಸೌಲಭ್ಯ ಸದುಪಯೋಗಪಡಿಸಿ ಕೊಳ್ಳಬೇಕು ಮತ್ತು ಮಹಿಳಾ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸಬೇಕು ಎಂದರು.ನಗರಸಭೆ ಉಪಾಧ್ಯಕ್ಷ ಎಂ.ಭಕ್ತವತ್ಸಲಂ, ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕ ವೈ.ಪ್ರಭುದಾಸ್, ಸಹಕಾರ ಅಭಿವದ್ಧಿ ಅಧಿಕಾರಿ ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.ಸ್ವರ್ಣಭೂಮಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಆರ್.ಗಾಯತ್ರಿ ಸ್ವಾಗತಿಸಿದರೆ, ವೈ.ಶಾಂತಿ ವರದಿ ವಾಚಿಸಿದರು. ಸಮಾಜ ಸೇವಕ ಆರ್.ಪ್ರಭುರಾಂ ನಿರೂಪಿಸಿ, ಕಾರ್ಯದರ್ಶಿ ಎಲ್.ಗೌರಿಬಾಯಿ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry