ಸಾರ್ವಜನಿಕರಿಗೆ ಕಾನೂನು ಅರಿವು ಅತ್ಯಗತ್ಯ

7

ಸಾರ್ವಜನಿಕರಿಗೆ ಕಾನೂನು ಅರಿವು ಅತ್ಯಗತ್ಯ

Published:
Updated:

ಕೊಪ್ಪ: `ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಲು ಅವುಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲು ಕಾನೂನು ಅರಿವು ನೆರವು ಸಮಿತಿ ಕಾರ್ಯಪ್ರವೃತ್ತವಾಗಿದೆ~ ಎಂದು ನ್ಯಾ. ವೀರಭದ್ರಯ್ಯ ಹೇಳಿದರು.ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಪ್ರವಾಸಕ್ಕೆ ಮಂಗಳವಾರ ಚಾಲನೆ  ನೀಡಿ ಅವರು ಮಾತನಾಡಿದರು. ಕಾನೂನು ಸಾಕ್ಷರತಾ ರಥ ತಾಲ್ಲೂಕಿನಲ್ಲಿ 2 ದಿನಗಳ ಕಾಲ ಸಂಚರಿಸಲಿದೆ.

ಜಯಪುರ, ಹರಿಹರಪುರ ಸೇರಿದಂತೆ ಐದು ಕೇಂದ್ರಗಳಲ್ಲಿ ಕಾನೂನು ತಜ್ಞರು ಉಚಿತ ಮಾಹಿತಿ ನೀಡಲಿದ್ದಾರೆ.ಕಾನೂನು ಅರಿವಿಲ್ಲದೆ ಸಾಕಷ್ಟು ಅಪರಾಧ ನಡೆಯುತ್ತವೆ. ಆದರೆ ಇವು ಕ್ಷಮಾರ್ಹವಲ್ಲ ಎಂದು ನ್ಯಾಯಾಧೀಶರು ಹೇಳಿದರು.ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ, ಕಂದಾಯ, ಶಿಕ್ಷಣ, ಅರಣ್ಯ ಇಲಾಖೆಗಳು ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸೀತೂರು ಚಂದ್ರಶೇಖರ್ ರಾವ್ ವಹಿಸಿದ್ದರು.ತಹಶೀಲ್ದಾರ್ ಲಿಂಗಪ್ಪ ಗೌಡ, ಇ.ಓ. ತಿಪ್ಪೇಶ್, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ವಕೀಲರ ಸಂಘದ ಕಾರ್ಯದರ್ಶಿ ಆದರ್ಶ, ವಕೀಲ ನಾರಾಯಣಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry