ಸೋಮವಾರ, ಡಿಸೆಂಬರ್ 16, 2019
18 °C

ಸಾರ್ವಜನಿಕ ಆಸ್ಪತ್ರೆಗೆ ಕೀಲಿ ಜಡಿದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಇಲ್ಲಿನ ಅಶೋಕ ನಗರ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಪ್ರಯತ್ನಿಸಿ ಗುಲ್ಬರ್ಗ ಆಸ್ಪತ್ರೆಗೆ ದಾಖಲಾಗಿದ್ದ ಆಶಾ ಅಬ್ದುಲ್ ರೆಹಮಾನ(27) ಹಾಗೂ ಆಕೆಯ ಅತ್ತೆ ಹಮೀದಾ ಸೈಯದ್(46)ಬುಧವಾರ ಗುಲ್ಬರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಗು ಫಾತಿಮಾ ಅಬ್ದುಲ್ ರೆಹಮಾನ(4) ತೀವ್ರವಾಗಿ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.ಹಿನ್ನೆಲೆ: ಕುಟುಂಬ ವ್ಯಾಜ್ಯದ ಕಾರಣದಿಂದಾಗಿ ಬೇಸತ್ತ ಆಶಾ ಅಬ್ದುಲ್ ರೆಹಮಾನ ರಾತ್ರಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅತ್ತೆ ಹಮೀದಾ ಸೈಯದ್ ಮಧ್ಯ ಪ್ರವೇಶಿಸಿ ಸೊಸೆಯನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಬೆಂಕಿ ಅತ್ತೆ ಹಾಗೂ ಪಕ್ಕದಲ್ಲಿದ್ದ ಮಗು ಫಾತಿಮಾಗೂ  ಸಹ ತಗುಲಿ ತೀವ್ರ ಗಾಯಗೊಂಡಿದ್ದಾರೆ. ಮೂವರನ್ನು ಇಲ್ಲಿನ ಸಮುದಾಯ ಆಸ್ಪತ್ರೆಗೆ,ಸಾಗಿಸಲಾಯಿತಾದರೂ ಅಲ್ಲಿ ಯಾವುದೆ ವೈದ್ಯರಿಲ್ಲದ ಕಾರಣ ಕುಟುಂಬದ ಸದಸ್ಯರು ಮತ್ತು ಸಾರ್ವಜನಿಕರು ಪರದಾಡಿದ್ದಾರೆ. ಸ್ಥಳೀಯ ವೈದ್ಯ ಡಾ.ಅಹಮದ್ ಪಟೇಲ್ ಹಾಗೂ ಪೊಲೀಸರ ನೆರವಿನಿಂದ ಮೂವರನ್ನು ತುರ್ತುವಾಹನದಲ್ಲಿ ರಾತ್ರಿ ಗುಲ್ಬರ್ಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅತ್ತೆ ಹಾಗೂ ಸೊಸೆ ಬುಧವಾರ ಸಾವಿಗೀಡಾಗಿದ್ದಾರೆ.ಜನರ ಆಕ್ರೋಶ: ರಾತ್ರಿ ಹೊತ್ತಿನಲ್ಲಿ ಯಾವುದೆ ವೈದ್ಯರು, ಸಿಬ್ಬಂದಿ ಆಸ್ಪತ್ರೆಯಲ್ಲಿ ಇರದಿರುವುದನ್ನು ಕಂಡ ಸಾರ್ವಜನಿಕರು ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಶಿವರಾಜ ಸಜ್ಜನ್‌ಶೆಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತಕ್ರಮ ತೆಗೆದು ಕೈಗೊಳ್ಳುವ ಬಗ್ಗೆ ಲಿಖಿತ ಭರವಸೆ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.ಪಟ್ಟಣದ ಹಿರಿಯ ವೈದ್ಯ ಡಾ.ಎಂ.ಎ.ರಶೀದ್, ಚಂದ್ರಿಕಾ ಪರಮೇಶ್ವರ, ಕೃಷ್ಣಪ್ಪ ಕರಣಿಕ, ನಾಗರಾಜ ಸಿಂಘೆ, ಎಸ್.ಎಚ್.ಜಗನ್ನಾಥ, ಇರ್ಫಾನ್, ವಿವಿಧ ಸಂಘಟನೆಗಳ ಮುಕಂಡರು, ನಗರಸಭೆ ಸದಸ್ಯರು ಉಪಸ್ಥಿತರಿದ್ದ್ರು. ಸಿಪಿಐ ಶರಣಪ್ಪ ಹಿಪ್ಪರಗಿ, ಎಸ್‌ಐ ಸುನೀಲ್ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಸಾರ್ವಜನಿಕರನ್ನು ನಿಂಯತ್ರಿಸುವಲ್ಲಿ ಹರಸಾಹಸ ಮಾಡಬೇಕಾಯಿತು.

ಪ್ರತಿಕ್ರಿಯಿಸಿ (+)