ಸಾರ್ವಜನಿಕ ಜಾಗೃತಿಗಾಗಿ ಪರಿಸರ ಸ್ನೇಹಿ ಕಾಗದ ಗಣೇಶ

7

ಸಾರ್ವಜನಿಕ ಜಾಗೃತಿಗಾಗಿ ಪರಿಸರ ಸ್ನೇಹಿ ಕಾಗದ ಗಣೇಶ

Published:
Updated:
ಸಾರ್ವಜನಿಕ ಜಾಗೃತಿಗಾಗಿ ಪರಿಸರ ಸ್ನೇಹಿ ಕಾಗದ ಗಣೇಶ

ಬೆಂಗಳೂರು: ಬಣ್ಣದ-ಬಣ್ಣದ ಗಣೇಶನ ವಿಗ್ರಹಗಳ ವಿಸರ್ಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಗ್ ಎಫ್‌ಎಂ (92.7) ವಾಹಿನಿಯು ರಾಮ್ ಕಿ ಗ್ರೂಪ್ ಆಫ್ ಕಂಪೆನಿ ಸಹಯೋಗದಲ್ಲಿ ಕಾಗದದಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಿದೆ.ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪರಿಸರವಾದಿ ಸುರೇಶ್ ಹೆಬ್ಳೀಕರ್ ಈ ಕಾಗದದ ಗಣೇಶ ಮೂರ್ತಿಗಳನ್ನು ಬಿಡುಗಡೆ ಮಾಡಿದರು.`ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಹ ಬಣ್ಣ-ಬಣ್ಣಗಳ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಈ ಕಾಗದದ ಗಣೇಶ ಮೂರ್ತಿಗಳನ್ನು ಪರಿಚಯಿಸಲಾಗುತ್ತಿದೆ~ ಎಂದು ಹೆಬ್ಳೀಕರ್ ತಿಳಿಸಿದರು.ಎಫ್.ಎಂ.ನ ರೇಡಿಯೋ ಜಾಕಿ ರೋಹಿತ್ ಮಾತನಾಡಿ, `ಬಿಗ್ ಎಫ್‌ಎಂ ನಟ ಉಪೇಂದ್ರ ಕುರಿತು ಕೇಳುವ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಕೇಳುಗರ ಮನೆಗೆ ಉಪೇಂದ್ರ ಅವರೇ ಆಗಮಿಸಿ ಈ ಕಾಗದದ ಗಣೇಶ ಮೂರ್ತಿಗಳನ್ನು ನೀಡಲಿದ್ದಾರೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry