ಸಾರ್ವಜನಿಕ ಮೈದಾನ ಗುಳುಂ

7

ಸಾರ್ವಜನಿಕ ಮೈದಾನ ಗುಳುಂ

Published:
Updated:

ಜೆ.ಪಿ.ನಗರ ಒಂದನೇ ಹಂತ 32ನೇ ಮುಖ್ಯ ರಸ್ತೆ ಹಾಗೂ 11ಬಿ ಅಡ್ಡ ರಸ್ತೆಯ ಬಳಿ ಶ್ರೀಮಂತ ವಿದ್ಯಾಸಂಸ್ಥೆಯೊಂದು ಪ್ರಾಥಮಿಕ ಹಂತದಿಂದ ಎಂಜಿನಿಯರಿಂಗ್ ಕಾಲೇಜ್‌ವರೆಗೆ ಶಾಲೆಗಳನ್ನು ನಡೆಸುತ್ತಿದೆ.ಅದಕ್ಕೆ ಹೊಂದಿಕೊಂಡಂತೆ ದಕ್ಷಿಣ ಭಾಗದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಶಾಲವಾದ ಸಿ.ಎ ಮೈದಾನವಿದೆ. ಇದನ್ನು ಈ ಸಂಸ್ಥೆ ತನ್ನ ಶಾಲೆಯ ವಿದ್ಯಾರ್ಥಿಗಳ ದ್ವಿಚಕ್ರ ವಾಹನ, ಸೈಕಲ್ ನಿಲುಗಡೆ, ತನ್ನ ಬಸ್ಸುಗಳ ನಿಲುಗಡೆಗೆ ಮತ್ತು ತಾನು  ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿದೆ.ಇದು ಬಿಬಿಎಂಪಿ ಜಾ. ಜೆ.ಪಿ.ನಗರದ ನಿವಾಸಿಗಳ ಮಕ್ಕಳ ಆಟಪಾಟಕ್ಕಾಗಿ ಮೀಸಲಾದ ಜಾಗ. ಹಿಂದೊಮ್ಮೆ ಈ ವಿಚಾರವನ್ನು ಜೆಪಿ ನಗರ ಕ್ಷೇಮಾಭಿವೃದ್ಧಿ ಸಂಘವು ಕ್ಷೇತ್ರದ ಶಾಸಕರ ಗಮನಕ್ಕೆ ತಂದಿತ್ತು.

 

ಆಗ ಅವರು ಮೈದಾನದ ಸುತ್ತ ತಡೆಗೋಡೆ ನಿರ್ಮಿಸಿ ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲು ಶಂಕುಸ್ಥಾಪನೆ ಸಹ ಮಾಡಿದ್ದರು. ಆದರೆ, ಶುರು ಮಾಡಿದ 1-2 ದಿನದಲ್ಲಿ ಕೆಲಸ ನಿಲ್ಲಿಸಲಾಯಿತು.ಇದು ಹೀಗೇ ಮುಂದುವರಿದರೆ ಮುಂದೆ ಒಂದು ದಿನ ಇದರಲ್ಲಿ ಕಟ್ಟಡಗಳು ಬರಬಹುದು. ಈ ಜಾಗ ಬಿಬಿಎಂಪಿಗೆ ಸೇರಿದ್ದೆ ಅಥವಾ ವಿದ್ಯಾಸಂಸ್ಥೆಗೆ ಸೇರಿದ್ದೆ ಎಂಬ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಿ, ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲು ಅನುಕೂಲ ಮಾಡಿಕೊಡಬೇಕು.ಇದೇ ರೀತಿ, ಜೆ.ಪಿ.ನಗರ ಒಂದನೇ ಹಂತ 29 ಮತ್ತು 25ನೇ ಮುಖ್ಯರಸ್ತೆ ಮಧ್ಯೆ ಅಂದರೆ ಎಲ್‌ಐಸಿಯ ಜೀವನ್ ಸುರಭಿ ಮತ್ತು ಜೀವನ್ ಸಾಥಿ ಅಪಾರ್ಟ್‌ಮೆಂಟ್ ಮಧ್ಯೆ ಇರುವ 10ಎ ಅಡ್ಡ ರಸ್ತೆ ಅಪಾರ್ಟ್‌ಮೆಂಟ್ ನಿವಾಸಿಗಳ ಕಾರು ನಿಲುಗಡೆ ಸ್ಥಳವಾಗಿದೆ. ಇದರ ಬಗ್ಗೆ ಸಹ ತನಿಖೆ ನಡೆಯಬೇಕು.

 -ಬಿ.ಎನ್. ರಾಜ್ಎಂಬಿಎಸ್ ಹೆಚ್ಚಿಸಿ

ಎಂಬಿಎಸ್ 5 ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅದನ್ನು ನಿಯಮಿತವಾಗಿ ಓಡಿಸಿ ಪ್ರಯಾಣದ ಅವಧಿ ಕಡಿಮೆ ಮಾಡಲು ಬಿಎಂಟಿಸಿಗೆ ಮನವಿ.

 - ನಿತ್ಯ ಪ್ರಯಾಣಿಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry