ಸಾರ್ವಜನಿಕ ರಸ್ತೆ ತೆರವಿಗೆ ಮನವಿ

7

ಸಾರ್ವಜನಿಕ ರಸ್ತೆ ತೆರವಿಗೆ ಮನವಿ

Published:
Updated:

ಹೊಸನಗರ: ತಾಲ್ಲೂಕಿನ ಮುತ್ತಲ ಗ್ರಾಮದ ಸರ್ವೆ.ನಂ 27ರ ಸರ್ಕಾರಿ ಜಾಗದಲ್ಲಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿದ ಪರಿಣಾಮ, ತಮ್ಮ ಹೊಲಕ್ಕೆ ಪ್ರವೇಶ ಮಾಡಲಾಗದೆ ಬೇಸಾಯ ಹಾಳು ಬಿದ್ದಿದ್ದು ನ್ಯಾಯ ಒದಗಿಸಿಕೊಡಬೇಕು ಎಂದು ಸ್ಥಳೀಯ ರೈತರು ಮಂಗಳವಾರ ತಹಶೀಲ್ದಾರ್‌ಗೆ ಮನವಿ ನೀಡಿದರು.‘ಅನೇಕ ವರ್ಷಗಳಿಂದಲೂ ನಮ್ಮ ಖಾತೆಯ ಹೊಲಗಳಿಗೆ  ಹೋಗಲು ಇರುವ ಏಕೈಕ ರಸ್ತೆ ಇದಾಗಿದೆ. ಎರಡು ವರ್ಷಗಳಿಂದ ಬೇಸಾಯಕ್ಕೆ ಹೋಗದಂತೆ ತಡೆ ಒಡ್ಡಿರುವ ಪರಿಣಾಮ ನಾಟಿ ಮಾಡದೇ ಜೀವನ ಕಷ್ಟವಾಗಿದೆ’ ಎಂದು ತಿಳಿಸಿದರು.ಸಂಬಂಧಿಸಿದ ಅಧಿಕಾರಿಗಳು, ರಸ್ತೆಗೆ ಬೇಲಿ ಹಾಕಿರುವುದನ್ನು ತೆರವುಗೊಳಿಸಬೇಕು. ಇದುವರೆಗೆ ಆಗಿರುವ ನಷ್ಟವನ್ನು ಕೊಡಿಸಬೇಕು ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮುತ್ತಲಾ ಗ್ರಾಮಸ್ಥರಾದ ಸಳ್ಳಿ ಪುಟ್ಟಸ್ವಾಮಿ, ಮಂಜಪ್ಪ, ಕೇಶವ, ಕೆ.ಮಂಜಪ್ಪ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry