ಸಾರ್ವಜನಿಕ ಷೇರುಪಾಲು:ಸೆಬಿ ಗಡುವು

ಶನಿವಾರ, ಮೇ 25, 2019
32 °C

ಸಾರ್ವಜನಿಕ ಷೇರುಪಾಲು:ಸೆಬಿ ಗಡುವು

Published:
Updated:

ನವದೆಹಲಿ (ಪಿಟಿಐ): ಸಾರ್ವಜನಿಕರಿಗೆ ಕನಿಷ್ಠ ಷೇರು ಪಾಲು ವಿತರಿಸಲು ನೋಂದಾಯಿತ ಕಂಪೆನಿಗಳಿಗೆ ನಿಗದಿಪಡಿಸಿರುವ ಕನಿಷ್ಠ ಸಮಯ ಮಿತಿ ವಿಸ್ತರಿಸುವುದಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.ಈ ಸಮಯ ಮಿತಿಯು ಮುಂದಿನ ವರ್ಷದ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದೆ. `ಸೆಬಿ~ ನಿಗದಿಪಡಿಸಿರುವ ಈ ಮೂರು ವರ್ಷಗಳ ಅವಧಿ ತುಂಬಾ ಕಡಿಮೆ ಎನ್ನುವ ಕಂಪೆನಿಗಳ ವಾದ ತಪ್ಪು ಎಂದು `ಸೆಬಿ~ ಅಧ್ಯಕ್ಷ ಯು.ಕೆ.ಸಿನ್ಹಾ ಶನಿವಾರ ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.ಸಮಯ ಮಿತಿ ಮುಗಿದರೂ ಹಲವು ಕಂಪೆನಿಗಳು ಇನ್ನೂ ಸಾರ್ವಜನಿಕ ಷೇರು ಪಾಲು ವಿತರಿಸಿಲ್ಲ. 1,259 ಕಂಪೆನಿಗಳು ಈವರೆಗೆ ಷೇರುಪಾಲು ವರದಿಯನ್ನೇ ಸಲ್ಲಿಸಿಲ್ಲ ಎಂದರು.ಷೇರುಪೇಟೆಯಲ್ಲಿ ನೋಂದಾಯಿಸಿಕೊಂಡಿರುವ 4,967 ಕಂಪೆನಿಗಳಲ್ಲಿ 206 ಸಂಸ್ಥೆಗಳು ಮಾತ್ರ ಕನಿಷ್ಠ ಸಾರ್ವಜನಿಕ ಷೇರು ವಿತರಣೆ ನಿಯಮ ಪಾಲಿಸಿವೆ ಎಂದು ಮುಂಬೈ ಷೇರುಪೇಟೆ (ಬಿಎಸ್‌ಇ) ಹಂಗಾಮಿ `ಸಿಇಒ~ ಆಶಿಷ್ ಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry