ಬುಧವಾರ, ಜೂನ್ 16, 2021
27 °C

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ದಾಳಿ: ಸ್ಥಳದಲ್ಲೇ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಫಿ ಡೇ, ಕ್ಲಬ್, ರೆಸ್ಟೋರೆಂಟ್ ಸೇರಿದಂತೆ ನಗರದ ವಿವಿದೆಡೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರಿಗೆ ಹಾಗೂ ಶಾಪ್‌ಗಳ ಮಾಲೀಕರಿಗೆ ಗುರುವಾರ ಸ್ಥಳದಲ್ಲೇ ದಂಡ ವಿಧಿಸಿದರು.



ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿರುವ ಹೋಟೆಲ್, ಶಾಪಿಂಗ್ ಮಾಲ್, ಕಾಫಿ ಡೇ, ಕ್ಲಬ್, ರೆಸ್ಟೋರೆಂಟ್ ಸೇರಿದಂತೆ ಒಟ್ಟು 22 ಕಡೆ ದಾಳಿ ನಡೆಸಲಾಗಿದೆ. ಧೂಮಪಾನ ನಿಷೇಧದ ಫಲಕಗಳನ್ನು ಹಾಕಿರದ ಶಾಪ್‌ಗಳ ಮಾಲೀಕರನ್ನು ವಿಚಾರಣೆ ನಡೆಸಲಾಯಿತು ಎಂದು ಪಾಲಿಕೆಯ ಪೂರ್ವ ವಲಯದ ಉಪ ಆರೋಗ್ಯ ಅಧಿಕಾರಿ ಡಾ. ಶ್ರೀಧರ್ ತಿಳಿಸಿದರು.



ನಗರದ ಜಾವಾಸಿಟಿ, ಏರ್‌ಲೈನ್ಸ್, ಓ ಅಂಡ್ ಟಿ ರೆಸ್ಟೋರೆಂಟ್, ಎಂ.ಜಿ ರಸ್ತೆಯಲಿರುವ ಕೆಫೆ ಕಾಫಿ ಡೇ ಸೇರಿದಂತೆ ಆರು ಶಾಪ್‌ಗಳಿಂದ 22,100 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.



ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯ (ಕೋಟ್ಪಾ) ಶಿಫಾರಸಿನಂತೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ.



ಶಾಪ್ ಮಾಲೀಕರಿಗೆ ಒಂದು ವಾರ ಗಡವು ನೀಡಲಾಗಿದ್ದು, ಕಾಯ್ದೆಯ ಶಿಫಾರಸುಗಳನ್ನು ಪಾಲಿಸಲು ಸೂಚಿಸಲಾಗಿದೆ ಎಂದರು.  



 ಕೋಟ್ಪಾ ಕಾಯ್ದೆ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಕೋಟ್ಪಾ ಕಾಯಿದೆ ಹೇಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.