ಶುಕ್ರವಾರ, ಮಾರ್ಚ್ 5, 2021
25 °C

ಸಾಲದ ಹೊರೆ ತಾಳದೆ ರೈತ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲದ ಹೊರೆ ತಾಳದೆ ರೈತ ಆತ್ಮಹತ್ಯೆ

ಶಹಾಪುರ (ಯಾದಗಿರಿ ಜಿಲ್ಲೆ): ಹತ್ತಿ, ಭತ್ತ ಬೆಲೆಯ ತೀವ್ರ ಕುಸಿತದಿಂದ ಕಂಗೆಟ್ಟ ರೈತರೊಬ್ಬರು ಮಂಗಳವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಾಲ್ಲೂಕಿನ ಗೋಗಿ (ಕೆ) ಗ್ರಾಮದ ಬಸವರಾಜಪ್ಪ ಹಣಮಂತರಾಯ ಶಿರಡ್ಡಿ (50) ಮೃತಪ ಟ್ಟಿದ್ದು, ಇವರಿಗೆ   ಇಬ್ಬರು ಪುತ್ರರು ಇದ್ದಾರೆ. ತಮ್ಮ ಹೊಲಕ್ಕೆ ತೆರಳಿ ಕ್ರಿಮಿನಾಶ ಕವನ್ನು ಸೇವಿಸಿದ್ದಾರೆ. ಸುದ್ದಿ ತಿಳಿದು ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೃತರು ಐದು ಎಕರೆ ಜಮೀನು ಹೊಂದಿದ್ದು, 25 ಎಕರೆ ಹೊಲವನ್ನು ಗುತ್ತಿಗೆ ರೂಪದಲ್ಲಿ ಪಡೆದುಕೊಂಡು ಹತ್ತಿ, ಭತ್ತ ಬಿತ್ತನೆ ಮಾಡಿದ್ದರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ವ್ಯವಸಾಯ ಸಹಕಾರ ಸಂಘ, ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಗ್ರಾಮದ ಕೆಲವರ ಬಳಿ ಕೈಸಾಲ–ಹೀಗೆ ಒಟ್ಟು ₹ 16 ಲಕ್ಷ ಸಾಲ ಮಾಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಮನೋಜ್‌ ಕುಮಾರ ಜೈನ್ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ  ಮೃತ ಬಸವರಾಜಪ್ಪನ ಮನೆಗೆ ಭೇಟಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.