`ಸಾಲಾಪುರಕ್ಕೆ ನೀರಾವರಿ: ಪ್ರಸ್ತಾವ'

6

`ಸಾಲಾಪುರಕ್ಕೆ ನೀರಾವರಿ: ಪ್ರಸ್ತಾವ'

Published:
Updated:

ರಾಮದುರ್ಗ: ನಿರಂತರ ಬರಗಾಲ ಪೀಡಿತ ಪ್ರದೇಶ ಎಂದು ಪರಿಗಣಿಸಿರುವ ಸಾಲಾಪುರ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಘಟಪ್ರಭಾ ನದಿಯಿಂದ ಏತ ನೀರಾವರಿ ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.ತಾಲ್ಲೂಕಿನ ಸಾಲಾಪುರ ಗ್ರಾಮದಲ್ಲಿ `ಮಹಿಳಾ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸವ್ವ ಕಂಬಳಿ ಅಧ್ಯಕ್ಷತೆ ವಹಿಸಿದ್ದರು.

ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಇಂದ್ರವ್ವ ಹಂಪಿಹೊಳಿ, ಕೆಎಂಎಫ್ ನಿರ್ದೇಶಕ ಉದಯಸಿಂಹ ಶಿಂಧೆ, ತಾಪಂ ಸದಸ್ಯೆ ಮಂಜುಳಾ ದೇವರಡ್ಡಿ, ಶಿವಪ್ಪ ಹಂಪಿಹೊಳಿ, ದುಂಡಪ್ಪ ದೇವರಡ್ಡಿ, ಬಸಪ್ಪ ಹಂಪಿಹೊಳಿ, ನೀಲಪ್ಪ ಚಾಕಲಬ್ಬಿ ವೇದಿಕೆ ಮೇಲಿದ್ದರು. ಲಕ್ಷ್ಮಣ ಕಳಸಗೇರಿ ಸ್ವಾಗತಿಸಿ ಕಡೆಯಲ್ಲಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry