ಸಾಲಿಗ್ರಾಮ: ನಾಲೆ, ಕೆರೆಗೆ ಚರಂಡಿ ನೀರು

7

ಸಾಲಿಗ್ರಾಮ: ನಾಲೆ, ಕೆರೆಗೆ ಚರಂಡಿ ನೀರು

Published:
Updated:

ಸಾಲಿಗ್ರಾಮ: ಚಾಮರಾಜ ನಾಲೆ ಹಾಗೂ ಪಟ್ಟಣದ ದೊಡ್ಡಕೆರೆಗೆ ಶೌಚಾಲಯದ ನೀರು ಬರದಂತೆ ಕ್ರಮ  ಕೈಗೊಳ್ಳಬೇಕು ಎಂದು ತಾಲ್ಲೂಕು  ಪಂಚಾಯಿತಿ   ಕಾರ್ಯನಿರ್ವಾಹಣಾಧಿಕಾರಿ ಮತ್ತು ಲೋಕೋಪಯಾೀಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಶಾಸಕ ಸಾ.ರಾ.ಮಹೇಶ್ ಮಂಗಳವಾರ ಸೂಚಿಸಿದರು.ದೊಡ್ಡಕೆರೆಯ ಏರಿಯ ಮೇಲೆ ರೂ.4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಕ್ಷಣಾ ಗೋಡೆಯ ಕಾಮ ಗಾರಿಯನ್ನು ವೀಕ್ಷಿಸಿದ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು.

ಪಟ್ಟಣದ ಕೆಲವು ವಾರ್ಡ್‌ಗಳಿಂದ ಶೌಚಾಲಯದ ನೀರು ಚಾಮರಾಜ ನಾಲೆಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ಹಲವು ಗ್ರಾಮಗಳ ಜನತೆ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಇದನ್ನು ತಪ್ಪಿಸಲು ಯಾೀಜನೆ ಯಾಂದನ್ನು ಸಿದ್ಧಪಡಿಸಬೇಕು ಎಂದು ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.ಪಟ್ಟಣದ ಮುಂಭಾಗ ಇರುವ ದೊಡ್ಡಕೆರೆ ಅಂಗಳಕ್ಕೂ ಶೌಚಾಲಯದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನೀರು ಕಲುಷಿತ ಗೊಳ್ಳುತ್ತಿದೆ. ಇದನ್ನು ತಪ್ಪಿಸಲು ದೊಡ್ಡ ಚರಂಡಿಯನ್ನು ತೆಗೆಯಲಾಗಿದ್ದರೂ ಸದುಪಯಾವಾಗುತ್ತಿಲ್ಲ. ಚಾಮರಾಜ ನಾಲೆ ಹಾಗೂ ದೊಡ್ಡಕೆರೆಗೆ ಬೀಳುತ್ತಿರುವ ಶೌಚಾಲಯದ ನೀರನ್ನು ಪಟ್ಟಣದಿಂದ ಹೊರ ಹಾಕಲು ತಕ್ಷಣವೇ ಯೋಜನೆಯನ್ನು ಸಿದ್ಧಪಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಹೇಳಿದರು. ಪಟ್ಟಣದಲ್ಲಿ ಆಟೋ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತೆ ಆಗಿದೆ. ಆದ್ದರಿಂದ ಆಟೋ ನಿಲ್ದಾಣವನ್ನು ನಿರ್ಮಿಸಲು ಅನುಮತಿ ನೀಡಬೇಕು ಎಂದು ಆಟೋಚಾಲಕರ ಸಂಘದ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದರು.ಶಾಸಕರೊಂದಿಗೆ ತಾ.ಪ. ಇಓ ಬಸವರಾಜ್, ಸಹಕಾರಿ ಧುರೀಣ ಎಸ್.ಎಸ್. ರಾಮಕೃಷ್ಣೇಗೌಡ,  ತಾ.ಪಂ.ಮಾಜಿ ಸದಸ್ಯ ಎಸ್.ಎಂ.ಶ್ರೀನಿವಾಸ್‌ಗೌಡ, ಗ್ರಾ.ಪಂ. ಅಧ್ಯಕ್ಷ ನಟರಾಜ್, ಮಾಜಿ ಅಧ್ಯಕ್ಷ ಎಸ್.ಆರ್.ದಿನೇಶ್, ಗ್ರಾ.ಪಂ.ಸದಸ್ಯರಾದ  ಮಾಡ್ರನ್ ನರಸಿಂಹ, ಐಯಾಜ್, ಕೋಟೇಗೌಡ, ಏಜಾಜ್,ಚುಂಚನಕಟ್ಟೆ ಮಧು, ದೀಲಿಪ್‌ಗೌಡ,    ಪ್ರಸನ್ನಚನ್ನೇಗೌಡ, ಎಸ್.ಟಿ.ರೇವಣ್ಣ, ಎಸ್.ಎಸ್.ವೆಂಕಟೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry