ಸಾಲುಮರದ ತಿಮ್ಮಕ್ಕನ ಸೇವೆ ಅನುಕರಣೀಯ
ಕಂಪ್ಲಿ: ಸಾಲು ಮರದ ತಿಮ್ಮಕ್ಕನ ಪರಿಸರ ಪ್ರೇಮ ನಮಗೆಲ್ಲರಿಗೂ ಆದರ್ಶ ಮತ್ತು ಅನುಕರಣೀಯ ಎಂದು ಹೊಸ ಪೇಟೆ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಬಿ. ಪ್ರಸಾದ್ ಹೇಳಿದರು.
ಪಟ್ಟಣದ ಎಸ್.ಎನ್ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶುಕ್ರವಾರ ಜರುಗಿದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ `ಪರಿಸರ ಮತ್ತು ನಾನು~ ಕುರಿತು ಮಾತನಾಡಿ, ಮನೆಗೊಂದು ಮರ ನೆಟ್ಟು ಪರಿಸರ ಕಾಪಾಡುವಂತೆ ಮನವಿ ಮಾಡಿದರು.
ಮಾನವನ ಕೊಡಲಿಪೆಟ್ಟಿಗೆ ಮರಗಳು ಬಲಿಯಾ ಗುತ್ತಿದ್ದು, ಇದರಿಂದ ಪರಿಸರ ವಿನಾಶ ವಾಗುತ್ತಿದೆ. ಈ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷೆ ರಶ್ಮಿ ರಾಘವೇಂದ್ರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ವಿನಂತಿಸಿದರು.
ಮುಖ್ಯಗುರು ರತ್ನಮ್ಮ, ನಿವೃತ್ತ ಶಿಕ್ಷಕ ಉಡುಪಿ ಸುಬ್ರಹ್ಮಣ್ಯಾಚಾರ್, ಸುಂಕದ ಸೋಮಶೇಖರ, ಶಿಕ್ಷಕ ದೊಡ್ಡಮನಿ, ಪಂಪಯ್ಯ, ಪೋಷಕರು ಹಾಜರಿದ್ದರು.
ಶಾಲೆಗೆ ನೀರಿನ ಟ್ಯಾಂಕ್ ನೀಡಿದ ಸುಬ್ರಹ್ಮಣ್ಯಾ ಚಾರ್ ಮತ್ತು `ಸುಭದ್ರಮ್ಮ ರಂಗ ಕಟ್ಟೆ~ಯನ್ನು ದುರಸ್ತಿಗೊಳಿಸಿದ ಬಳ್ಳಾರಿ ನಿರಂಜನ ಗುಪ್ತ ಅವರನ್ನು ಸನ್ಮಾನಿಸಿಲಾಯಿತು. ಪವಿತ್ರ ಪ್ರಾರ್ಥಿಸಿದರು, ಶಿಕ್ಷಕ ವಿರೂ ಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ವಿಶ್ವನಾಥ್ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.