ಸಾಲ್ಮನಿ ಅಧ್ಯಕ್ಷ, ಚೋಟಿಮಾ ಉಪಾಧ್ಯಕ್ಷೆ

7
ಪಕ್ಷೇತರರ ಬೆಂಬಲ: ಲಿಂಗಸುಗೂರ ಪುರಸಭೆ ಕಾಂಗ್ರೆಸ್ ಮಡಿಲಿಗೆ

ಸಾಲ್ಮನಿ ಅಧ್ಯಕ್ಷ, ಚೋಟಿಮಾ ಉಪಾಧ್ಯಕ್ಷೆ

Published:
Updated:

ಲಿಂಗಸುಗೂರು: ಸ್ಥಳೀಯ ಪುರಸಭೆಯ ಏಳನೆ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಮಾರಸ್ವಾಮಿ ಈರಣ್ಣ ಸಾಲ್ಮನಿ ಅಧ್ಯಕ್ಷರಾಗಿ, ಚೋಟಿಮಾ ಹುಸೇನಸಾಬ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಈರಣ್ಣ ಸಾಲ್ಮನಿ (ಕಾಂಗ್ರೆಸ್), ಶರಣಗೌಡ ಅಮರೇಗೌಡ ಮಾಲಿಪಾಟೀಲ (ಜೆಡಿಎಸ್). ಉಪಾಧ್ಯಕ್ಷ ಸ್ಥಾನಕ್ಕೆ ಚೋಟಿಮಾ ಹುಸೇನಸಾಬ (ಕಾಂಗ್ರೆಸ್), ಜರಿನಾಬೇಗಂ ಅಬ್ದುಲ್ಲಾ (ಜೆಡಿಎಸ್) ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಅಂಗೀಕರಿಸಿದ ಚುನಾವ ಣಾಧಿಕಾರಿ ಜಿ.ಎಸ್. ಮಹಾಜನ ಚುನಾವಣಾ ಪ್ರಕ್ರಿಯೆ ನಂತರ ಆಯ್ಕೆಗೊಂಡ ಹೆಸರು ಪ್ರಕಟಿಸಿದರು.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿತ್ತು. 23 ಸದಸ್ಯರ ಪೈಕಿ ಕಾಂಗ್ರೆಸ್- 11, ಜೆಡಿಎಸ್- 08, ಕೆಜೆಪಿ- 01, ಬಿಎಸ್ಆರ್- 01, ಪಕ್ಷೇತರ- 02 ಸದಸ್ಯ ಬಲ ಹೊಂದಿದ್ದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ 13 ಸದಸ್ಯರ ಬೆಂಬಲ ಅವಶ್ಯವಿತ್ತು. ಕಾಂಗ್ರೆಸ್ ಪಕ್ಷೇತರ ಮತ್ತು ಇತರೆ ಪಕ್ಷದ ಅಭ್ಯರ್ಥಿಗಳ ಹೊಂದಾಣಿಕೆ ಯಿಂದ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ.ವಿಜಯೋತ್ಸವ: ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡರು.ಅಭಿವೃದ್ಧಿಗೆ ಆದ್ಯತೆ

ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಮಾಜಿ ಸಚಿವ ಅಮರೇಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ಲ ಅವರ ಸಹಯೋಗದಲ್ಲಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಕುಮಾರಸ್ವಾಮಿ ಸಾಲ್ಮನಿ, ಪುರಸಭೆ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry