ಸೋಮವಾರ, ನವೆಂಬರ್ 18, 2019
28 °C

ಸಾಲ ಖಾತೆಯ ಪ್ರತ್ಯೇಕ ಕೊಠಡಿ ಉದ್ಘಾಟನೆ

Published:
Updated:

ಹುನಗುಂದ: ಇಲ್ಲಿನ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡದಲ್ಲಿ ಬ್ಯಾಂಕಿನ ಸಾಲ ಖಾತೆಯ ಗ್ರಾಹಕರ ಪಾವತಿಯ ಪ್ರತ್ಯೇಕ ಕೊಠಡಿಯನ್ನು ಉಪಾಧ್ಯಕ್ಷ ರವಿ ಹುಚನೂರ ಇತ್ತೀಚೆಗೆ ಸರಳ ಪೂಜೆ ನೆರವೇರಿಸಿ ಉದ್ಘಾಟಿಸಿದರು.



ಪ್ರಧಾನ ವ್ಯವಸ್ಥಾಪಕ ಮನೋಹರ ವಾಲ್ಮೀಕಿ ಮಾತನಾಡಿ, `ಬ್ಯಾಂಕಿನ ಕೆಳ ಅಂತಸ್ತಿನಲ್ಲಿ ಉಳಿತಾಯ ಖಾತೆ ಮತ್ತು ಇತರ ಖಾತೆಗಳ ಗ್ರಾಹಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ವ್ಯವಸ್ಥೆಯನ್ನು ಕಟ್ಟಡದ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ಮಾಡಿದೆ. ಸಾಲಗಾರರು ಇದರ ಮಾಹಿತಿಯನ್ನು ಪಡೆದು ಸಹಕರಿಸಬೇಕು' ಎಂದರು.



  ನಿರ್ದೇಶಕರಾದ ಶಶಿಕಾಂತ ಪಾಟೀಲ, ಸಿದ್ದಪ್ಪ ಹೊಸೂರ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಬಿ.ವಿ.ಪಾಟೀಲ, ಎ.ಆರ್.ನಿಂಬಲಗುಂದಿ, ಎಸ್. ವಿ. ಹಳಪೇಟಿ ಮತ್ತು ಉಪಪ್ರಧಾನ ವ್ಯವಸ್ಥಾಪಕ ಸಂಗಣ್ಣ ಗಂಜಿಹಾಳ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)