ಸಾಲ ಬಾಧೆಯಿಂದ ರೈತನ ಆತ್ಮಹತ್ಯೆ

7

ಸಾಲ ಬಾಧೆಯಿಂದ ರೈತನ ಆತ್ಮಹತ್ಯೆ

Published:
Updated:

ಸಿಂದಗಿ (ವಿಜಾಪುರ ಜಿಲ್ಲೆ): ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿರಸಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ನಾಗಪ್ಪ ಹನುಮಂತ ವಡ್ಡರ (34) ಎಂದು ಗುರುತಿಸಲಾಗಿದೆ. ಇವರ ಜಮೀನಿನಲ್ಲಿನ ಹತ್ತಿ ಬೆಳೆ ರೋಗದಿಂದಾಗಿ ಸಂಪೂರ್ಣ ನಾಶವಾಗಿದ್ದರಿಂದ ಜಿಗುಪ್ಸೆಗೊಂಡು ಕೀಟನಾಶಕ ಸೇವಿಸಿದ್ದಾರೆ.

ತೀವ್ರ ಅಸ್ವಸ್ಥಗೊಂಡ ನಾಗಪ್ಪ ಅವರನ್ನು ವಿಜಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಇವರು ಬಗಲೂರು ಸಹಕಾರಿ ಸೊಸೈಟಿಯಿಂದ ರೂ.31 ಸಾವಿರ ಹಾಗೂ ಖಾಸಗಿಯಾಗಿಯೂ ಸಾಲ ಪಡೆದುಕೊಂಡ್ದ್ದಿದರೆಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry