ಸಾಲ ಮಿತಿ ಹೆಚ್ಚಿಸದಿದ್ದರೆ ದೇಶ ದಿವಾಳಿ: ಒಬಾಮ

7

ಸಾಲ ಮಿತಿ ಹೆಚ್ಚಿಸದಿದ್ದರೆ ದೇಶ ದಿವಾಳಿ: ಒಬಾಮ

Published:
Updated:

ಲಿಬರ್ಟಿ (ಅಮೆರಿಕ), (ಎಎಫ್‌ಪಿ):  ಸರ್ಕಾರ ತೆಗೆದು­ಕೊಳ್ಳುವ ಸಾಲದ ಮಿತಿ  ಹೆಚ್ಚಿಸದಿದ್ದರೆ ದೇಶ ದಿವಾಳಿ­ಯಾಗ ಬೇಕಾ­ಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಕೆ ನೀಡಿದ್ದಾರೆ.‘ಸಾಲದ ಮಿತಿ ಹೆಚ್ಚಿಸುವ ಪ್ರಸ್ತಾವ ಕೈಬಿಡಲು ರಿಪಬ್ಲಿಕನ್‌ ಪಕ್ಷದವರು ಮಾಡು­ತ್ತಿರುವ ತಂತ್ರ ಬೇಜವಾಬ್ದಾರಿತ­ನದ ಪರಮಾವಧಿ’ ಎಂದೂ ಅವರು ಗುಡುಗಿದ್ದಾರೆ.‘ಸಾಲ ಮಿತಿ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಯನ್ನು ಮುಂದಿನ ಕೆಲವು ವಾರಗಳಲ್ಲಿ ಸಂಸತ್‌ ಅನುಮೋದಿಸದಿದ್ದರೆ  ಕೆಟ್ಟ ಪರಿಣಾಮ ಎದುರಿಸಬೇ ಕಾ­ಗು­ತ್ತದೆ. ಅಮೆರಿಕದ ಇತಿಹಾಸಲ್ಲಿ ಎಂದೂ ಈ ರೀತಿ ಆಗಿಲ್ಲ’ ಎಂದೂ ಒಬಾಮ ಆತಂಕ ವ್ಯಕ್ತಪಡಿಸಿದ್ದಾರೆ.ಮಸೂದೆಗೆ ತಣ್ಣೀರು: ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷ ಮತ್ತು ಅಧ್ಯಕ್ಷ ಬರಾಕ್‌ ಒಬಾಮ ಅವರ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆ (‘ಒಬಾಮ ಕೇರ್’) ವಿಫಲಗೊಳಿಸುವ  ಮಸೂದೆಯೊಂದನ್ನು ಜನ­ಪ್ರತಿ­­ನಿ­ಧಿ­­ಗಳ ಸಭೆಯಲ್ಲಿ ಶುಕ್ರವಾರ ಅಂಗೀಕರಿಸ ಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry