ಸಾವಯವ,ರಸಸಾರದ ಆಲೂಗಡ್ಡೆಗೆ ಬೇಡಿಕೆ

7

ಸಾವಯವ,ರಸಸಾರದ ಆಲೂಗಡ್ಡೆಗೆ ಬೇಡಿಕೆ

Published:
Updated:

ಶಿಡ್ಲಘಟ್ಟ: ರಾಸಾಯನಿಕ ಗೊಬ್ಬರ ಮತ್ತು ಬೆಳೆಗೆ ಸಿಂಪಡಿಸುವ ಔಷಧಿ ರೈತರಿಗೆ ಸದಾ ಹೊರೆಯಾಗುತ್ತದೆ. ಇದಕ್ಕೆ ಬದಲಾಗಿ ಸಾವಯವ ಮತ್ತು ರಸಸಾರವನ್ನು ಬಳಸಿ ತಾಲ್ಲೂಕಿನ ಮತ್ತೂರು ಗ್ರಾಮದ ರೈತರೊಬ್ಬರು ಉತ್ತಮ ಗುಣಮಟ್ಟದ ಆಲೂಗಡ್ಡೆ ಬೆಳೆದಿದ್ದಾರೆ. ತಾಲ್ಲೂಕಿನ ಮುತ್ತೂರು ಗ್ರಾಮದ ಸೂರ್ಯ ನಾರಾಯಣಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ 50 ಕೆ.ಜಿ. ತೂಕದ 650 ರಿಂದ 700 ಚೀಲ ಗಳಷ್ಟು ಆಲೂಗಡ್ಡೆಯನ್ನು ಬೆಳೆ ದಿದ್ದಾರೆ. ಇವರು ರಸಸಾರ ತೊಟ್ಟಿ ಯನ್ನು ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ದನಕರುಗಳ ಗಂಜಲ, ಸಗಣಿ, ಸೊಪ್ಪು ತ್ಯಾಜ್ಯಗಳನ್ನೆಲ್ಲಾ ಸುರಿದು ಉತ್ಪತ್ತಿ ಯಾಗುವ ಸಾರದ ರಸವನ್ನು ಡ್ರಿಪ್ ಮೂಲಕ ತೋಟಕ್ಕೆ ಹರಿಸಿ ಉತ್ತಮ ಗುಣಮಟ್ಟದ, ಗಾತ್ರದ ಆಲೂಗಡ್ಡೆ ಬೆಳೆದಿದ್ದಾರೆ.ಹಲವು ವರ್ಷಗಳಿಂದ ಇವರು ಆಲೂಗಡ್ಡೆ ಬೆಳೆಯುತ್ತಿದ್ದು ಕಳೆದ ವರ್ಷದಿಂದ ರಸಸಾರದ ಪ್ರಯೋಗ ಕೈಗೊಂಡು ಶೇಕಡಾ 50ರಷ್ಟು ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಹಣವನ್ನು ಉಳಿಸಿದ್ದಾರೆ. ಬೆಳೆಯ ಗುಣ ಮಟ್ಟವೂ ವೃದ್ಧಿಯಾಗಿದೆ. ಇಳುವರಿ ಹೆಚ್ಚಾಗಿದೆ. ಕಳೆದ ವರ್ಷ 26 ಅಡಿ ಉದ್ದ 13 ಅಡಿ ಅಗಲ ಮತ್ತು 8 ಅಡಿ ಆಳದ ರಸಸಾರ ತೊಟ್ಟಿಯನ್ನು ಸಾವಯವ ಕೃಷಿ ಮಿಷನ್ ಅವರ ಸಲಹೆಯಂತೆ ನಿರ್ಮಿಸಿದೆವು. ಅದಕ್ಕೆ 85 ಸಾವಿರ ರೂ ಪಾಯಿ ಖರ್ಚಾಯಿತು. ಕೃಷಿ ಇಲಾಖೆಯಿಂದ 30 ಸಾವಿರ ರೂ ಪಾಯಿ ಸಹಾಯಧನ ಅದಕ್ಕಾಗಿ ನೀಡಿ ದರು. ಬಟ್ಟೆ ಒಗೆಯುವ ನೀರು ಮತ್ತು ಕಳ್ಳಿಯನ್ನು ಬಿಟ್ಟು ಬೇರೆಲ್ಲಾ ತ್ಯಾಜ್ಯ ವನ್ನೂ ಅದಕ್ಕೆ ಹರಿಸುತ್ತೇವೆ ಎಂದು ರೈತ ಸೂರ್ಯನಾರಾಯಣಪ್ಪ `ಪ್ರಜಾ ವಾಣಿ~ಗೆ ತಿಳಿಸಿದರು.ರಾಸಾಯನಿಕ ಗೊಬ್ಬರ ಮತ್ತು ಬೆಳೆಗೆ ಸಿಂಪಡಿಸುವ ಔಷಧಿಯ ಹಣ ಅರ್ಧದಷ್ಟು ಉಳಿತಾಯವಾಗಿದೆ. ಇಳು ವರಿ ಮೂರನೇ ಒಂದು ಭಾಗದಷ್ಟು ಹೆಚ್ಚಾಗಿದೆ. ಕಳೆ ಕಡಿಮೆ ಆಗಿದ್ದರಿಂದಾಗಿ ಕೂಲಿಯ ಹಣವೂ ಉಳಿಕೆಯಾಗಿದೆ. ಒಟ್ಟಾರೆ ಖರ್ಚೆಲ್ಲಾ ಕಳೆದು ನಮಗೆ 2 ಲಕ್ಷ ರೂಪಾಯಿ ಲಾಭವಾಗಿದೆ ಎಂದು ಅವರು ಹೇಳಿದರು.ಸಾವಯವ ಕೃಷಿ ಮಿಷನ್ ಯೋಜನೆ ಯಲ್ಲಿ ರಸಸಾರ ತೊಟ್ಟಿ ನಿರ್ಮಿಸಿ ಕೊಳ್ಳಲು ರೈತರಿಗೆ ಸಹಾಯಧನ ನೀಡ ಲಾಗುತ್ತಿದೆ.ಇದರಿಂದ ಸಾವಯವ ಕೃಷಿ ಯತ್ತ ಪಯಣ ಪ್ರಾರಂಭವಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟ, ಹಣದ ಉಳಿತಾಯ ಹಾಗೂ ರಾಸಾ ಯನಿಕ ರಹಿತ ಫಸಲನ್ನು ಪಡೆ ಯಬಹುದು. ಭೂಮಿಯ ಫಲ ವತ್ತತೆ ಯೂ ಇದರಿಂದ ವೃದ್ಧಿಯಾಗುತ್ತದೆ. ಕಡಿಮೆ ನೀರಿದ್ದರೂ ಬೆಳೆ ಬೆಳೆಯ ಬಹುದು.

 

ಈ ಪದ್ಧತಿಯನ್ನು ರೈತ ರೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರ ಟ್ರಸ್ಟ್‌ನ ಸಂಚಾಲಕ ಬಿ.ರಾಮಾಂಜಿನಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry