ಶುಕ್ರವಾರ, ಮೇ 14, 2021
29 °C

`ಸಾವಯವ ಕೃಷಿಯತ್ತ ರೈತರ ಒಲವು ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಾವಯವ ಕೃಷಿಯತ್ತ ರೈತರ ಒಲವು ಅಗತ್ಯ'

ಹುಣಸೂರು: ಬರಡು ಭೂಮಿಯ ಫಲವತ್ತತೆ ವೃದ್ಧಿಮಾಡಿ ಬೆಳೆಯ ಇಳುವರಿ ಹೆಚ್ಚಿಸುವ ಮೂಲ ಉದ್ದೇಶವನ್ನು ಭೂ ಚೇತನ ಯೋಜನೆ ಹೊಂದಿದೆ ಎಂದು ಕೃಷಿ ತಜ್ಞ ಪ್ರೊ. ಗೋವಿಂದರಾಜ್ ತಿಳಿಸಿದರು.ತಾಲ್ಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರು ಗ್ರಾಮದಲ್ಲಿ ನಡೆದ ಭೂ ಚೇತನ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಪಂಚವಾರ್ಷಿಕ ಯೋಜನೆಗಳಲ್ಲಿ ಹಸಿರು ಕ್ರಾಂತಿಯನ್ನು ಗುರಿಯಾಗಿಸಿಕೊಂಡು ಆಹಾರ ಸ್ವಾವಲಂಬನೆಗೆ ಒತ್ತು ನೀಡಲಾಯಿತು. ನಂತರದಲ್ಲಿ ರೈತರು ಬಳಸಿದ ರಾಸಾಯನಿಕ ಗೊಬ್ಬರದ ಫಲವಾಗಿ ಜಮೀನಿಗೆ ಇಂದು ಯಾವುದೇ ಪೋಷಕಾಂಶ ನಿರೀಕ್ಷೆಯಷ್ಟು ಫಲಿತಾಂಶ ರೈತನಿಗೆ ಸಿಗದಾಗಿದೆ ಎಂದರು.ಕೃಷಿಕರಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆ ಬಗ್ಗೆ ಆಸಕ್ತಿ ಕಡಿಮೆಯಾಗಿದ್ದು, ರಸಗೊಬ್ಬರದ ಬಳಕೆಯಿಂದ ಭೂಮಿ ಬಂಜರಾಗಿದೆ.

ಸಾವಯವ ಕೃಷಿಯತ್ತ ರೈತ ಒಲವು ತೋರಬೇಕಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಯವ ಕೃಷಿ ಮತ್ತು ಕೊಟ್ಟಿಗೆ ಗೊಬ್ಬರ ಬಳಕೆ ಕುರಿತು ಮಾಹಿತಿ ನೀಡಿ ರೈತನಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.ಸ್ತ್ರಿ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಪಿ.ಕೆ. ರಾಮು, ಪುಟ್ಟರಾಜೇಗೌಡ, ಯಶೋದಕುಮಾರ್, ನಿಂಗರಾಜ್, ನಾಗರಾಜಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.