ಸಾವಯವ ಕೃಷಿಯಿಂದ ಉತ್ತಮ ಇಳುವರಿ

7

ಸಾವಯವ ಕೃಷಿಯಿಂದ ಉತ್ತಮ ಇಳುವರಿ

Published:
Updated:

ಚಡಚಣ: `ಕೃಷಿ ತ್ಯಾಜ್ಯ ಹಾಗೂ ಜಾನುವಾರುಗಳಿಂದ ಪಡೆದ ಸಗಣಿ ಹಾಗೂ ಮೂತ್ರದಿಂದ ಉತ್ತಮ ಗೊಬ್ಬರ ಪಡೆದು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಲು ಸಾಧ್ಯ~ ಎಂದು ಡಾ.ಸಿಂಪಿ ಲಿಂಗಣ್ಣ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಚಿದಾನಂದ ಕಲಬುರ್ಗಿ ಹೇಳಿದರು.ಸಮೀಪದ ಏಳಗಿ (ಪಿ.ಎಚ್) ಗ್ರಾಮದಲ್ಲಿ ಈಚೆಗೆ ಕೃಷಿ ಇಲಾಖೆ, ಕಬ್ಬು ಸಂಶೋಧನಾ ಕೇಂದ್ರ ಸಂಕೇಶ್ವರ ಹಾಗೂ ಡಾ.ಸಿಂಪಿ ಲಿಂಗಣ್ಣ ಸಾವಯವ ಕೃಷಿ ಪರಿವಾರ ರೈತರಿಗಾಗಿ ಆಯೋಜಿ ಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ರಾಸಾಯನಿಕ ಗೊಬ್ಬರದಿಂದ ಭೂಮಿಯ ಫಲವತ್ತತೆ ಕಳೆದುಕೊಂಡು ಕೆಲವು ವರ್ಷಗಳಲ್ಲಿ ಅದು ಬಂಜರ ಭೂಮಿಯಾಗಿ ಮಾರ್ಪಡುವುದು ಎಂದ ಅವರು ಆಧುನಿಕ ಕೃಷಿ ಪದ್ಧತಿ ಯೊಂದಿಗೆ, ನೈಸರ್ಗಿಕವಾಗಿ ಹಾಗೂ ಅಗ್ಗವಾಗಿ ದೊರೆಯುವ ಸಾವಯವ ಗೊಬ್ಬರ ಉಪಯೋಗಿಸುವಂತೆ ಅವರು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಮಖಂಡಿಯ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ರಂಗಪ್ಪ ಬೂದಿ, ಪರಿಸರದ ಸಮತೋಲನ ಕಾಪಾಡು ವುದರೊಂದಿಗೆ ಉತ್ತಮ ಆಹಾರ ಹಾಗೂ ಆರೋಗ್ಯ ಕಾಪಾಡಿಕೊ ಳ್ಳುವದು ಸಾವಯವ ಕೃಷಿಯ ಮುಖ್ಯ ಉದ್ದೇಶವಾಗಿದೆ. ಸಾವಯವ ಕೃಷಿಯಿಂದ ಭೂಮಿಯ ಆರೋಗ್ಯ ವನ್ನು, ಮಣ್ಣಿನ ಫಲವತ್ತತೆಯನ್ನು ಹಾಗೂ ಮಾನವನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತೀಯ ಕಾರ್ಯದರ್ಶಿ ಗುರುನಾಥ ಬಗಲಿ, ಸಹಾಯಕ ಕೃಷಿ ನಿರ್ದೆಶಕ ಪ್ರಕಾಶ ಚವ್ಹಾಣ, ಸಮನ್ವಯಾಧಿಕಾರಿ ಅಕ್ಕಮಹಾದೇವಿ ಹೊಕ್ರಾಣಿ, ಎಸ್.ಎ. ಗದ್ದನಕೇರಿ, ರಾಜೇಂದ್ರ ಪೋದ್ದಾರ. ಜಿ.ಪಂ. ಸದಸ್ಯೆ ಜ್ಯೋತಿ ಕೋಳಿ, ತಾ.ಪಂ. ಸದಸ್ಯ ರಮೇಶ ಜಿತ್ತಿ, ಮಹಾದೇವ ಪಾಟೀಲ, ಎಸ್.ಟಿ. ಪಾಟೀಲ, ಶಿವರುದ್ರ ಮಣೂರ, ಧರೆಪ್ಪ ಕಿತ್ತೂರ, ರಾಜಶೇಖರ ಕಲ್ಯಾಣಶೆಟ್ಟಿ, ಶಾಮರಾವ ಖಡಖಡೆ, ಕಲ್ಲಪ್ಪ ಬಿರಾ ದಾರ, ಮುರುಳೀಧರ ದೇಶಪಾಂಡೆ, ಚನಬಸಪ್ಪ ಬಡಚಿ, ಗಿರಿಮಲ್ಲ ರುದ್ರಾಕ್ಷಿ, ಜಗನ್ನಾಥ ಪಾಟೀಲ, ಚಂದ್ರಕಾಂತ ಕೋಳಿ ಮತ್ತಿತರರು ಉಪಸ್ಥಿತರಿದ್ದರು.

ಕಾಮಣ್ಣ ಕರಕಿ ಸ್ವಾಗತಿಸಿದರು. ಸಿದ್ಧರಾಮ ಬಗಲಿ  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry