ಭಾನುವಾರ, ಮೇ 22, 2022
22 °C

ಸಾವಯವ ಕೃಷಿ ಕೈಗೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ರೈತರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಮಾಡಬೇಕಾಗಿದೆ ಎಂದು ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಇಲ್ಲಿಯ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಕೃಷಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೃಷಿ ಭೂಮಿ ಬರಡಾಗುವುದನ್ನು ತಪ್ಪಿಸಲು ಸಾವಯವ ಕೃಷಿಯತ್ತ ರೈತರು ಚಿಂತಿಸಬೇಕಾಗಿದೆ. ಕೃಷಿ ಮೇಳದಲ್ಲಿ ನುರಿತ ತಜ್ಞರಿಂದ ಉಪಯುಕ್ತ ಸಲಹೆ ಪಡೆದು ಬೇಸಾಯದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆಯತ್ತ ಗಮನಹರಿಸಬೇಕು. ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಆಹಾರದ ಸಮಸ್ಯೆ ಕಾಡಬಹುದು ಎಂದರು.ಶಿರಸಿ ಉಪವಿಭಾಗಾಧಿಕಾರಿ ಜಿ.ಜಗದೀಶ, ಕೃಷಿಕರು ತಮ್ಮ ಜಮೀನನ್ನು ಮಾರಿಕೊಂಡು ಅದೇ ಜಮೀನಿನಲ್ಲಿ ಕೂಲಿಯಾಗಿ ದುಡಿಯುವ ಪ್ರಸಂಗ ಬರಬಾರದು. ಕೃಷಿ ಭೂಮಿಯನ್ನು ಕೃಷಿಯೇತರ ಚಟಿವಟಿಕೆಗಳಿಗೆ ಬಳಸುವುದನ್ನು ಕಡಿಮೆ ಮಾಡಬೇಕು ಎಂದರು. ರಮೇಶ ಜಿಗಳೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಕರ್ಷಕ ಡೊಳ್ಳು ಕುಣಿತದೊಂದಿಗೆ ಸಾಗಿದ ಕೃಷಿ ಮೇಳದ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣ ಕುಂಭ ಮೇಳದೊಂದಿಗೆ ಸ್ವಾಗತಿಸಿದರು. ನೇಗಿಲಯೋಗಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಕೊರವರ, ಪ.ಪಂ. ಅಧ್ಯಕ್ಷ ಮುನಾಫ ಮಿರ್ಜಾನಕರ, ಉಪಾಧ್ಯಕ್ಷ ವೀರಭಧ್ರ ಶೇರಖಾನೆ, ಪ್ರೊಬೆಶನರಿ ಎ.ಸಿ ಯೋಗೇಶ, ತಹಸೀಲ್ದಾರ ಎಂ.ವಿ. ಕಲ್ಲೂರಮಠ, ಕಾ.ನಿ. ಅಧಿಕಾರಿ ವಿ.ಆರ್. ಬಸನಗೌಡ್ರ, ಪ್ರಗತಿಪರ ರೈತ ಸಂಗಮೇಶ ಬಿದರಿ, ಶಿವಪ್ಪ ನಾಯ್ಕ, ತುಕಾರಾಮ ಕಲಾಲ, ತುಕಾರಾಮ ಇಂಗಳೆ, ಎಂ.ಬಿ.ಕುಟ್ರಿ, ಸಹಾಯಕ ಕೃಷಿ ನಿರ್ದೇಶಕಿ ಪದ್ಮಜಾ ನಾಯ್ಕ ಇತರರು ಉಪಸ್ಥಿತರಿದ್ದರು. ಡಿ. ಹನಮಂತರಾಯಪ್ಪ ಸ್ವಾಗತಿಸಿದರು. ವಿ.ಬಿ.ಪುರಾಣಿಕ ನಿರ್ವಹಿಸಿದರು. ಸಿ.ಸಿ. ಹಳರಿತ್ತಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.