ಸೋಮವಾರ, ಜೂನ್ 14, 2021
26 °C

ಸಾವಯವ ಕೃಷಿ ರತ್ನ ಪ್ರಶಸ್ತಿ ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಘೊಷಿಸಿದ್ದ 2011-12ನೇ ಸಾಲಿನ `ಸಾವಯವ ಕೃಷಿ ರತ್ನ~ ಪ್ರಶಸ್ತಿಯನ್ನು ತೀರ್ಥಹಳ್ಳಿಯ    `ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ~ ತಿರಸ್ಕರಿಸಿದೆ.1999ರಲ್ಲಿ ಆರಂಭವಾದ ಪ್ರತಿಷ್ಠಾನವು ಅಂದಿನಿಂದ ಇಂದಿನವರೆಗೆ ಸ್ವಾವಲಂಬಿಯಾಗಿ ಬೆಳೆದಿದೆ. ಇದುವರೆಗೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಬಯಸಿದ್ದ 10 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿಯ ಅಗತ್ಯ ಇಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಸುಬ್ಬರಾವ್ ಅವರು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.`2008ರಲ್ಲಿ ಆರಂಭವಾದ ರಾಜ್ಯ ಸಾವಯವ ಕೃಷಿ ಮಿಷನ್‌ಗೆ 2011-12ರ ಬಜೆಟ್‌ನಲ್ಲಿ ಘೋಷಿಸಿದ್ದ 206.5 ಕೋಟಿ ರೂಪಾಯಿ ಪೈಕಿ ನಯಾಪೈಸೆಯನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಇದು ನಮಗೆ ನೋವು ತಂದಿದೆ. ನಾಡಿನ ಸಾವಯವ ಕೃಷಿಕರಿಗೆ ಭರವಸೆ ಕೊಟ್ಟಂತೆ, ಕೃಷಿ ಮಿಷನ್‌ಗೆ ಅನುದಾನ ನೀಡಬೇಕು~ ಎಂದು ಸುಬ್ಬರಾವ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.