ಸೋಮವಾರ, ಜೂನ್ 21, 2021
20 °C

ಸಾವಿರ ಜನರಿಗೆ:ಒಂದೇ ಕೊಳವೆ ಬಾವಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಿರ ಜನರಿಗೆ:ಒಂದೇ ಕೊಳವೆ ಬಾವಿ!

ಹುಣಸೂರು: ತಾಲ್ಲೂಕಿನ ಹಳೇ ಚಿಕ್ಕ ಹುಣಸೂರು ಗ್ರಾಮ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.ಗೋವಿಂದನಹಳ್ಳಿ ಪಂಚಾಯಿತಿಗೆ ಸೇರಿದ ಹಳೇ ಚಿಕ್ಕ ಹುಣಸೂರು ಗ್ರಾಮ ಲಕ್ಷ್ಮಣತೀರ್ಥ ನದಿ ದಡದ್ಲ್ಲಲಿದೆ. ಆದರೂ ಗ್ರಾಮಸ್ಥರು ನೀರಿಗಾಗಿ ಹಾಹಾಕಾರ ಅನುಭವಿಸು ತ್ತಿದ್ದಾರೆ.ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರಿಗೆ ಇರುವುದೊಂದೇ ಕೊಳವೆ ಬಾವಿ. ಈ ಬಾವಿಯಿಂದ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಕಡಿತ ಗೊಂಡರೆ ಗ್ರಾಮಸ್ಥರಿಗೆ ಕುಡಿಯಲು ಹನಿ ನೀರೂ ಸಿಗುವುದಿಲ್ಲ.ಗ್ರಾಮದಲ್ಲಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಬೆಳಿಗ್ಗೆ ಮನೆಯಿಂದ ಹೋದರೆ ಸಂಜೆ ಮನೆಗೆ ಮರಳುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುಡಿಯುವ ನೀರು ಬಿಡುವುದರಿಂದ ನೀರು ಸಂಗ್ರಹಿಸುವುದ ಅಸಾಧ್ಯವಾಗಿದೆ ಎಂದು ದೂರುತ್ತಾರೆ ಗ್ರಾಮದ ಮಹಿಳೆಯರು.ಗ್ರಾಮದ ರಸ್ತೆ ಮರಳು ಸಾಗಾಣೆ ಲಾರಿಗಳ ಹಾವಳಿಯಿಂದ ಹಾಳಾಗಿದೆ. ಗ್ರಾಮದೊಳಗಿನಿಂದ ಅಕ್ರಮ ಮರಳು ಸಾಗಣಿ ಲಾರಿಗಳು ಸಂಚರಿಸುತ್ತವೆ. ಇದರಿಂದ ರಸ್ತೆ ತುಂಬ ದೂಳು ಆವರಿಸುತ್ತದೆ. ಕೆಲವು ವರ್ಷಗಳ ಹಿಂದೆ ಗ್ರಾಮದಲ್ಲಿ ವಾಹನಗಳ ಸಂಚಾರ ಇರಲಿಲ್ಲ. ಈಗ ಅಕ್ರಮ ಮರಳು ಸಾಗಣೆ ಹೆಚ್ಚಾಗಿದೆ.

 

ಲಕ್ಷ್ಮಣ ತೀರ್ಥ ನದಿಯಲ್ಲಿ ತೆಗೆದ ಮರಳು ಸಂಗ್ರಹಿಸುವವರು ಗ್ರಾಮಕ್ಕೆ ಹೊಂದಿ ಕೊಂಡಿರುವ ಹೊಲ, ಗದ್ದೆ ಮತ್ತು ತೋಟಗಳ ಮೂಲಕ ಹಗಲಿರುಳು ಸಂಚರಿಸುತ್ತವೆ. ಭಾರಿ ವಾಹನಗಳ ಓಡಾಟದಿಂದ ಮಣ್ಣು ರಸ್ತೆ ಹದಗೆಟ್ಟಿದೆ. ಪಂಚಾಯಿತಿ ಈ ಬಗ್ಗೆ ಗಮನ ಹರಿಸಿಲ್ಲ.ಗ್ರಾಮದ ಏಕೈಕ ಕೊಳವೆ ಬಾವಿಯಿಂದ ಜನ- ಜಾನುವಾರುಗಳಿಗೆ ನೀರಿನ ಸರಬರಾಜು ಆಗುತ್ತದೆ. ಕುಡಿಯುವ ನೀರು ಸರಬರಾಜು ಸ್ಥಳದಲ್ಲೇ ಜಾನುವಾರುಗಳಿಗೆ ತೊಟ್ಟಿ ನಿರ್ಮಿಸಲಾಗಿದೆ. ಜಾನುವಾರುಗಳಿಗೆ ಕುಡಿಯಲು ಇಟ್ಟಿರುವ ನೀರಿನಲ್ಲಿ ಜನರೇ ಬಟ್ಟೆ ತೊಳೆಯುತ್ತಾರೆ.ಚರಂಡಿ ವ್ಯವಸ್ಥೆ, ಸಮರ್ಪಕ ರಸ್ತೆ ಗ್ರಾಮದಲ್ಲಿ ಇಲ್ಲ. ಹಲವು ಕಡೆ ರಸ್ತೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾ ಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಾರೆ ಎಂಬ ಆಕಾಂಕ್ಷೆ ಗ್ರಾಮಸ್ಥರಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.