ಶುಕ್ರವಾರ, ನವೆಂಬರ್ 22, 2019
25 °C
ರಷ್ಯಾದ ಕುಬೇರನ ಹೊಸ ಯೋಜನೆ

ಸಾವಿಲ್ಲದ ಯಂತ್ರ ಮಾನವ...!

Published:
Updated:

ವಾಷಿಂಗ್ಟನ್ (ಪಿಟಿಐ): ಮುಂದಿನ ಮೂರು ದಶಕಗಳ ಒಳಗೆ ಸಾವಿಲ್ಲದ ಯಂತ್ರ ಮಾನವನನ್ನು ಸೃಷ್ಟಿಸುವ ಹೊಸ ಯೋಜನೆಯೊಂದನ್ನು ರಷ್ಯಾದ ಕುಬೇರನೊಬ್ಬ ಬಿಚ್ಚಿಟ್ಟಿದ್ದಾನೆ. 2045ರ ಒಳಗಾಗಿ ತನ್ನ ಕನಸಿನ ಯಂತ್ರ ಮಾನವನನ್ನು ಅಭಿವೃದ್ಧಿಪಡಿಸುವುದಾಗಿ 32 ವರ್ಷದ ಡಿಮಿಟ್ರಿ ಇತ್ಸ್‌ಕೋವ್ ಘೋಷಿಸಿದ್ದಾರೆ.ಹಾಲಿವುಡ್‌ನ `ಟರ್ಮಿನೇಟರ್' ಚಿತ್ರದ ನಾಯಕನಂತೆ ಅರ್ಧ ಮಾನವ ದೇಹ ಮತ್ತರ್ಧ ಯಂತ್ರವನ್ನು ಹೊಂದಿರುವ ಮಾನವನನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಅವರು ಎರಡು ವರ್ಷಗಳಿಂದ ತಲ್ಲೆನರಾಗಿದ್ದಾರೆ.ಯಾಂತ್ರಿಕ ವ್ಯವಸ್ಥೆ ಹೊಂದಿದ ದೇಹದಲ್ಲಿ ಮಾನವನ ಮಿದುಳು, ಅರಿವು ಜ್ಞಾಪಕಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುವ ಉದ್ದೇಶ ಈ ಕುಬೇರನಿಗಿದೆ. ಡಿಮಿಟ್ರಿ ತಮ್ಮ ಈ ಮಹತ್ವಾಕಾಂಕ್ಷೆಯ ಈ ಯೋಜನೆಗೆ `ಅವತಾರ್' ಎಂದು ಹೆಸರಿಟ್ಟಿದ್ದಾರೆ.ವಿವಿಧ ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. 2020ರ ವೇಳೆಗೆ ಯೋಜನೆಯ ಮೊದಲ ಹಂತ `ಅವತಾರ್-ಎ'ಪೂರ್ಣಗೊಳ್ಳಲಿದೆ. ಎರಡನೇ ಹಂತ `ಅವತಾರ್-ಬಿ' 2025 ಹಾಗೂ 35ರ ವೇಳೆಗೆ `ಅವತಾರ್-ಸಿ'ಪೂರ್ಣಗೊಳ್ಳಲಿದೆ. ಎಲ್ಲವೂ ಡಿಮಿಟ್ರಿ ಎಣೆಕೆಯಂತೆಯೇ ನಡೆದದ್ದೇ ಆದಲ್ಲಿ 45ರ ಹೊತ್ತಿಗೆ ಸಂಪೂರ್ಣ ಯೋಜನೆ ಸಾಕಾರಗೊಳ್ಳಲಿದೆ.`ಸೈಬೋರ್ಗ್' ಎಂದು ಕರೆಯಲಾಗುವ ಈ ಯಂತ್ರ ಮಾನವನಿಗೆ ಭೌತಿಕ ಅಸ್ತಿತ್ವ ಇರುವುದಿಲ್ಲ. ಅಂತರ್ಜಾಲದ ಮಾದರಿಯಲ್ಲಿ ಮಾತ್ರ ಅಸ್ವಿತ್ವ ಹೊಂದಿರುತ್ತಾನೆ. ಬೆಳಕಿನಷ್ಟು ವೇಗದಲ್ಲಿ ಭೂಮಿಯಿಂದ ಬಾಹಾಕ್ಯಾಶದತ್ತ ಚಲಿಸುವ ಸಾಮರ್ಥವನ್ನು `ಸೈಬೋರ್ಗ್' ಹೊಂದಿರುತ್ತಾನೆ.

ಪ್ರತಿಕ್ರಿಯಿಸಿ (+)