ಸಾಹಿತಿ ಬಿರಾದಾರಗೆ ಶಿಕ್ಷಕರ ನಮನ

ಗುರುವಾರ , ಜೂಲೈ 18, 2019
25 °C

ಸಾಹಿತಿ ಬಿರಾದಾರಗೆ ಶಿಕ್ಷಕರ ನಮನ

Published:
Updated:

ಮುದ್ದೇಬಿಹಾಳ: `ನಾವು ಗೆಳೆಯರು, ನಾವು ಎಳೆಯರು~ ಹಾಡಿನ ಮೂಲಕ ರಾಜ್ಯದ ಮಕ್ಕಳಿಗೆಲ್ಲ ಪರಿಚಿತರಾಗಿದ್ದ ಹಿರಿಯ ಕವಿ ಶಂ.ಗು.ಬಿರಾದಾರ ಅವರ ನಿಧನಕ್ಕೆ ತಾಲ್ಲೂಕು  ಸೃಜನಶೀಲ ಶಿಕ್ಷಕರ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿತು.ಶುಕ್ರವಾರ ತಾಲ್ಲೂಕು ಪಂಚಾಯಿತಿ  ಸಭಾ ಭವನದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮೌನ ಆಚರಿಸಿ ಬಿರಾದಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ವೇದಿಕೆಯ ಅಧ್ಯಕ್ಷ ಡಿ.ಎಸ್.ಚಳಗೇರಿ, ಗೌರವ ಕಾರ್ಯದರ್ಶಿ ಆರ್.ಜಿ.ಕಿತ್ತೂರ, ಪ್ರಧಾನ ಕಾರ್ಯದರ್ಶಿ ಸಿದ್ಧನಗೌಡ ಬಿಜ್ಜೂರ, ಗೊಲ್ಲಾಳೇಶ ಹೂಗಾರ, ಎಂ.ಬಿ.ಗುಡಗುಂಟಿ, ಬಸವರಾಜ ದುದ್ದಗಿ, ಬಿ.ಎ.ಬೇವಿನಗಿಡದ,   ವಿ.ಎನ್. ನವಲಿ, ಎಸ್.ಎಸ್. ಕುಂಬಾರ, ಎಚ್.ಬಿ. ಪಾಟೀಲ, ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry