ಶುಕ್ರವಾರ, ಏಪ್ರಿಲ್ 16, 2021
31 °C

ಸಾಹಿತ್ಯದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಸಾಹಿತ್ಯದಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಪಾಲಕರು, ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಕಾರ್ಯದಲ್ಲಿ ತೊಡಗಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿ ಡಾ.ವಿ ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು.ನಿರಂತರ ಪ್ರಕಾಶನ ಹಾಗೂ ಸಮಷ್ಟಿ ಅಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಎಸ್.ಎಂ ಭೂಮರಡ್ಡಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಬೊಗಸೆ ತುಂಬಾ ಬಯಲು~, `ಕೆಳಗಲ ಮನಿ ಮಾಬವ್ವ~ ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಧುನಿಕ ಯಂತ್ರಜ್ಞಾನದತ್ತ ಹೆಚ್ಚು ಆಕರ್ಷಿತರಾಗಿರುವ ಯುವ ಪೀಳಿಗೆಯಲ್ಲಿ ಸಾಹಿತ್ಯದ ಅಭಿರುಚಿ, ಬರವಣಿಗೆ ಕೌಶಲಗಳು ಕ್ಷೀಣಿಸುತ್ತಿ ರುವುದು ಕ್ಷೇತ್ರದ ಹಿನ್ನೆಡೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ತಂತ್ರಜ್ಞಾನದ ಕುರಿತು ಹೇಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಾರೆಯೋ ಅದೇ ರೀತಿಯಲ್ಲಿ ಸಾಹಿತ್ಯದ ತಿಳುವಳಿಗೆಗೂ ಶ್ರಮಿಸಬೇಕು. ಪ್ರಸ್ತುತ ದಿನಗಳಲ್ಲಿ ಬಹುತೇಕ ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಮನೋಸ್ಥಿತಿಯನ್ನು ಅರಿತುಕೊಳ್ಳದೇ ಶಿಕ್ಷಣ ಕೊಡಿ ಸಲು ಮುಂದಾಗುತ್ತಾರೆ.ಪರಿಣಾಮ ಭವಿಷ್ಯ ದಲ್ಲಿ ಆ ಮಕ್ಕಳು ಯಶಸ್ವಿ ಕಾಣಲು ವಿಫಲರಾ ಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಅಭಿವೃದ್ಧಿ ಆಸಕ್ತಿಗಳನ್ನು ಅರಿತುಕೊಂಡು ಭವಿಷ್ಯದ ಹಿತ ದೃಷ್ಠಿಯಿಂದ ಗುಣಮಟ್ಟದ ಶಿಕ್ಷಣ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಸಾಹಿತ್ಯ ಕ್ಷೇತ್ರ ರಾಷ್ಟ್ರದ ಶ್ರೀಮಂತಿಕೆಯನ್ನು ಸಾರಿ ಹೇಳುತ್ತದೆ. ಅಲ್ಲದೆ, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜದ ಪ್ರಗತಿ ಪರ ಸಂಘ ಸಂಸ್ಥೆಗಳು ವಿನೂತನ ಕಾರ್ಯಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆ ಹೆಚ್ಚಿಸಲು ಸಾಧ್ಯ ಎಂದರು.ಬಾಗಲಕೋಟೆಯ ಹಿರಿಯ ಕತೆಗಾರ ಪ್ರೊ.ಅಬ್ಬಾಸ ಮೇಲಿನಮನಿ ಅವರಿಗೆ ನಿರಂತರ ಪ್ರಕಾಶನದಿಂದ `ಕಥಾ ಲೋಕದ ಜಂಗಮ~ ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಿ.ಎ.ರಾಯನಗೌಡ, ಕೃತಿಕಾರ ಎ.ಎಸ್. ಮಕಾನದಾರ, ಬಿ.ಎಸ್.ದುಂಡರಡ್ಡಿ, ಬಿ.ಎ.ಕೆಂಚರಡ್ಡಿ, ಪಿ.ಕೆ.ಜೋಶಿ, ಅಲ್ಲಾ ಗಿರಿರಾಜ, ಪ್ರಮೋದ ತುಗವಿ ಹಾಳ, ಶಹಜಾನ ಮುದಕವಿ, ಐ.ಜೆ.ಮ್ಯಾಗೇರಿ, ಬಿ.ಎಂ ಕುಕನೂರ, ಮಲ್ಲಿಕಾರ್ಜುನ ಕುಂಬಾರ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.