ಭಾನುವಾರ, ಏಪ್ರಿಲ್ 11, 2021
26 °C

ಸಾಹಿತ್ಯ ಚಟುವಟಿಕೆಗೆ ಸಹಕಾರ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಹುನಗುಂದ ತಾಲ್ಲೂಕಿನಲ್ಲಿ ಬರಹಗಾರರು, ಸಾಹಿತಿಗಳು, ಕಲಾವಿದರು, ಜಾನಪದ ಸಾಹಿತಿಗಳು ಅಧಿಕ ಪ್ರಮಾಣದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಿಂದ  ಹುನಗುಂದ ರಾಜ್ಯ ಮಟ್ಟದ ಸಾಹಿತ್ಯದಲ್ಲಿ ಗುರುತಿಸಿಕೊಂಡಿದೆ, ಸಾಹಿತ್ಯ ಚಟುವಟಿಕೆಗಳಿಗೆ ನಾನು ಯಾವಾಗಲೂ ಸಹಕಾರ ಕೊಡುತ್ತೇನೆ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಅವರು ಕೂಡಲಸಂಗಮದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಲ್ಲಿ ನಡೆದ ಹುನಗುಂದ ತಾಲ್ಲೂಕು ಘಟಕದ ಅಧಿಕಾರ ಪದಗ್ರಹಣ ಹಾಗೂ 2012 ರಿಂದ 2015ರ ವರೆಗಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಅನಕ್ಷರಸ್ಥ ಮಹಿಳೆಗೆ ಅಕ್ಷರವನ್ನು ಬರೆಸುವ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿದರು.ಜಮಖಂಡಿ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದರಾಮ ಮನಹಳ್ಳಿ ಮಾತನಾಡಿ ಸಮಾಜಕ್ಕೆ ಬುದ್ಧಿ ಹೇಳುವ ಶಕ್ತಿ ಸ್ವಾಮೀಜಿ, ಶಿಕ್ಷಕರು, ಸಾಹಿತಿಗಳಿಗೆ ಮಾತ್ರ ಇದೆ. ಸುಂದರ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಬಹಳ ಅವಶ್ಯವಾಗಿದೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಇಲಕಲ್ಲ ವಿಜಯ ಮಹಾಂತ ಮಠದ ಡಾ.ಮಹಾಂತ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎ.ಎಂ.ಮಡಿವಾಳರ, ಎನ್.ಎಂ.ಚಿನ್ನಣ್ಣವರ, ಎಲ್.ಎಂ.ಪಾಟೀಲ,  ಜಾಕೀರಹುಸೇನ್ ತಾಳಿಕೋಟಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ಸಿದ್ಧರಾಮ ಮನಹಳ್ಳಿ, ಎ.ಎಂ. ಮಡಿವಾಳರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅವರನ್ನು ಸನ್ಮಾನಿಸಲಾಯಿತು.ಎಚ್.ಕೆ.ನಾಗನೂರ ಪ್ರಾರ್ಥನಾ ಗೀತೆ ಹಾಡಿದರು. ವಿಜಯಕುಮಾರ ಗದ್ದನಕೇರಿ ಸ್ವಾಗತಿಸಿದರು, ಮಹಾಂತೇಶ ಗಜೇಂದ್ರಗಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ ಹಳ್ಳೂರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.