ಮಂಗಳವಾರ, ಮೇ 18, 2021
22 °C

ಸಾಹಿತ್ಯ ಚಳವಳಿ ಮೂಲಕ ಎಲ್‌ಬಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಪ್ರೊ.ಎಲ್.ಬಸವರಾಜು ಅವರು ಸಾಹಿತ್ಯ ರಚನೆ ಮೂಲಕ ಸಾಮಾಜಿಕ ಚಳವಳಿ ಮಾಡಿದರು~ ಎಂದು ಕನ್ನಡ ಹೋರಾಟಗಾರ ಪ. ಮಲ್ಲೇಶ್ ಭಾನುವಾರ ಬಣ್ಣಿಸಿದರು.ಕಲಾಮಂದಿರದ ಮನೆಯಂಗಳದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ `ಪ್ರೊ.ಎಲ್.ಬಸವರಾಜು ಅವರ ಸಾಮಾಜಿಕ ಆಶಯಗಳ ಒಂದು ಚಿಂತನೆ~ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.`ರಚನಾ ಸಾಹಿತ್ಯಕ್ಕೆ ಬಸವರಾಜು ಅವರು ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಅಲ್ಲಮಪ್ರಭು ಅವರ ವಚನಗಳನ್ನು ಸಾಕಷ್ಟು ಸಂಪಾದಿ ಸಿದ್ದಾರೆ. ಆದರೆ ಅವುಗಳನ್ನು ವಿಶ್ಲೇಷಣೆ ಮಾಡಿ ಅದನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಲಿಲ್ಲ. ಇನ್ನು ಮುಂದಾದರೂ ಪ್ರಜ್ಞಾವಂತರು ಈ ಕೆಲಸ ಮಾಡಿದರೆ ಜನರಿಗೆ ತಲುಪುತ್ತದೆ~ ಎಂದರು.`ವಿಜಾಪುರದ ಜ್ಞಾನಯೋಗಾ ಶ್ರಮದ ಸಿದ್ದೇಶ್ವರ ಸ್ವಾಮಿ ವಚನ ಸಾಹಿತ್ಯದ ಮುಖೇನ ಚಳವಳಿಯನ್ನು ಆರಂಭಿಸಿದರು. ಇದು ಸಾಕಷ್ಟು  ಓದುಗರ ಮೇಲೆ ಪರಿಣಾಮ ಬೀರಿತು. ಆದರೆ ಬರಬರುತ್ತಾ ವಚನ ಸಾಹಿತ್ಯ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗ ತೊಡ ಗಿದ್ದರಿಂದ ಹೋರಾಟವು ಸಹ ಮೂಲೆಗುಂಪಾಯಿತು. ಆದರೆ ಬಸವರಾಜು ಅವರು ಇದರಿಂದ ಹೊರತಾಗಿದ್ದರು. ಮಠ, ಜಾತಿಯತೆ, ರಾಜಕೀಯ ವಿಷಯಗಳಿಂದ ಅವರು ಹೊರಗಿದ್ದರು~ ಎಂದರು.`ಅಂಬೇಡ್ಕರ್ ತತ್ವದ ಆಧಾರದ ಮೇಲೆ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಲಾಯಿತು. ಆದರೆ ಡಿಎಸ್‌ಎಸ್ ಇದೀಗ ಕವಲೊಡೆದಿದೆ~ ಎಂದರು.ಪ್ರೊ.ನಂಗಲಿ ಚಂದ್ರಶೇಖರ್ ಅವರು ಮಾತನಾಡಿ, `ಕನ್ನಡ ಸಾಹಿತ್ಯ ಲೋಕಕ್ಕೆ ಬಸವರಾಜು ಅವರು ಆಮ್ಲಜನಕ ಇದ್ದಂತೆ. ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಎಲ್‌ಬಿ ಅವರು ಸೂಕ್ಷ್ಮ ಸಂವೇದನಾ ವ್ಯಕ್ತಿತ್ವ ಉಳ್ಳವರಾ ಗಿದ್ದರು. ಬಸವರಾಜು ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರು ಬರವಣಿಗೆ ನಮ್ಮನ್ನು ಕೆಣಕುತ್ತಿರುತ್ತವೆ~ ಎಂದು ಹೇಳಿದರು.ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ರಂಗ ನಿರ್ದೇಶಕ ಜನಾರ್ದನ್ (ಜನ್ನಿ) ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.