ಸಾಹಿತ್ಯ ಜಾತ್ರೆಗೆ ತೆರೆದುಕೊಳ್ಳದ ಸಿದ್ದಾಪುರ

7

ಸಾಹಿತ್ಯ ಜಾತ್ರೆಗೆ ತೆರೆದುಕೊಳ್ಳದ ಸಿದ್ದಾಪುರ

Published:
Updated:

ಸಿದ್ದಾಪುರ: ಇಡೀ ಕೊಡವರ ನಾಡು ಈಗ ಹಬ್ಬದ ಸಡಗರದಲ್ಲಿ ಮುಳುಗಿದೆ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಾದ್ಯಂತ ಸಂತಸದ ಹೊಳೆಯನ್ನೇ ಹರಿಸಿದೆ. ರಾಜ್ಯದ ಇತಿಹಾಸದಲ್ಲೇ ಚಿರಸ್ಮರಣೀಯ ಆಗುವ ಈ ದಿನಕ್ಕಾಗಿ ಜಿಲ್ಲೆಯ ಪ್ರತಿ ಊರೂ ಸಿದ್ಧಗೊಂಡಿವೆ. ಆದರೆ, ಪ್ರಮುಖ ಪಟ್ಟಣ ಸಿದ್ದಾಪುರ ಇದಕ್ಕೆ ಅಪವಾದ!ಹೌದು, ಅಚ್ಚರಿ ಅನ್ನಿಸಿದರೂ ಇದು ಸತ್ಯ. ಕೊಡಗಿನವರೆಲ್ಲ ಒಂದೆಡೆ ಸಮ್ಮೇಳನದ ಸಡಗರದಲ್ಲಿದ್ದರೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಇದರ ಸುಳಿವೇ ಕಾಣುತ್ತಿಲ್ಲ. ಸಾಹಿತ್ಯ ಪರಿಷತ್ತಿನ ಕೆಲ ಸದಸ್ಯರು ಸಮ್ಮೇಳನಕ್ಕೆ ತೆರಳಿದ್ದನ್ನು ಬಿಟ್ಟರೆ; ಉಳಿದವರಿಗೆಲ್ಲ ಇದು ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ಸಮ್ಮೇಳನದಿಂದ ಈ ಊರು ದೂರ ಉಳಿದಿದ್ದು ಸಾಹಿತ್ಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.ಕಳೆದೊಂದು ವರ್ಷದಿಂದಲೂ ಸಾಹಿತ್ಯ ಸಮ್ಮೇಳನ ನಡೆಯುತ್ತಿ ರುವುದರ ಬಗ್ಗೆ ಚರ್ಚೆ, ಜಾಗೃತಿ, ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಆದರೆ, ಇದು ಸಿದ್ದಾಪುರ ವ್ಯಾಪ್ತಿಯ ಜನರಿಗೆ ತಲುಪಲೇ ಇಲ್ಲ. ಸಿದ್ದಾಪುರಕ್ಕೆ ಸಮ್ಮೇಳನದ ‘ಕನ್ನಡ ರಥ’ ಆಗಮಿಸಿದ ಸಂದರ್ಭದಲ್ಲೂ ಅದನ್ನು ಸ್ವಾಗತಿಸಲು ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿದ್ದರು. ಜಿಲ್ಲೆಯ ಉಳಿದೆಡೆ ಸಮ್ಮೇಳನದ ಜಾಗೃತಿ, ಸ್ವಾಗತ, ಅಭಿನಂದನೆ, ಗೌರವ ಅರ್ಪಿಸುವ ಕಾರ್ಯಕ್ರಮ ಸಾಕಷ್ಟು ನಡೆದವು. ಆದರೆ, ಸಿದ್ದಾಪುರದಲ್ಲಿ ಇಂಥ ಜಾಗೃತಿ ನಡೆಯಲಿಲ್ಲ.ಬಿಕೋ ಎನ್ನುತ್ತಿದೆ ಪಟ್ಟಣ!

ಜಿಲ್ಲೆಯ ಎಲ್ಲೆಡೆ ಕನ್ನಡ ಬಾವುಟಗಳು, ಬಂಟಿಂಗ್‌ಗಳು, ಫ್ಲೆಕ್ಸ್‌ಗಳು ರಾರಾಜಿ ಸುತ್ತಿದ್ದರೆ; ಸಿದ್ದಾಪುರ ಪಟ್ಟಣ ಮಾತ್ರ ಬಿಕೋ ಎನ್ನುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಮೈಮರೆತು ಕುಳಿತಿದೆ. ಇದೇ ಇಲ್ಲಿನ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಜಿಲ್ಲೆಯ ಇತರೆಡೆಗಳಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವರ್ತಕರಿಗೆ, ಸಂಘ– ಸಂಸ್ಥೆಗಳಿಗೆ ಸಮ್ಮೇಳನದ ಅಂಗವಾಗಿ ಕನ್ನಡ ಬಾವುಟ ಹಾರಿಸಲು ಮನವಿ ಮಾಡಿದೆ. ಗ್ರಾಮ ಪಂಚಾಯಿತಿಯವರು ಸಹ ಸ್ವಾಗತ ಕೋರುವ ಫಲಕ, ಕಮಾನುಗಳನ್ನು ಹಾಕಿದ್ದಾರೆ. ಆದರೆ, ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಾತ್ರ.ಸಾಹಿತ್ಯ ಸಮ್ಮೇಳನಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ನಿದ್ರಿಸುತ್ತಿದೆ. ಕನಿಷ್ಠ ಕಾಳಜಿ ವ್ಯಕ್ತಪಡಿಸದೆ ದೂರ ಉಳಿದಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಅಮ್ಮತಿ ಹೋಬಳಿ ಘಟಕ ಸಿದ್ದಾಪುರದಲ್ಲಿದೆ. ಸ್ಥಳೀಯರಾದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್‌. ವೆಂಕಟೇಶ್‌ ಅವರೇ ಈ ಘಟಕದ ಅಧ್ಯಕ್ಷ. ಆದರೂ, ಕನ್ನಡ ಕೆಲಸಕ್ಕೆ ಯಾರೂ ಸ್ಪಂದಿಸದೇ ಇದ್ದುದು ಮಾತ್ರ ಜನರಲ್ಲಿ ಬೇಸರ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry