ಸಾಹಿತ್ಯ ನೊಬೆಲ್ ಸ್ವೀಡನ್ ಮಡಿಲಿಗೆ

7

ಸಾಹಿತ್ಯ ನೊಬೆಲ್ ಸ್ವೀಡನ್ ಮಡಿಲಿಗೆ

Published:
Updated:

ಸ್ಟಾಕ್‌ಹೋಮ್, (ಎಪಿ): ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಈ ಬಾರಿ ಸ್ವೀಡಿಷ್ ಕವಿ ಥಾಮಸ್ ಟ್ರಾನ್ಸ್‌ಟ್ರೋಮರ್ ಅವರಿಗೆ ಒಲಿದಿದೆ.

  ಮನುಷ್ಯನ ಮನಸ್ಸಿನ ನಿಗೂಢತೆ ಬಗ್ಗೆ ಅತಿ ವಾಸ್ತವವಾದ ಬರಹಗಳನ್ನು ಬರೆದ  ಥಾಮಸ್ ಟ್ರಾನ್ಸ್‌ಟ್ರೋಮರ್ ಅವರನ್ನು 2011 ನೇ ಸಾಲಿನ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.`ವಾಸ್ತವಕ್ಕೆ ತಾಜಾ ಆಗಿ ಪ್ರವೇಶ ಸಿಗುವಂತೆ ದಟ್ಟವಾದ ಪಾರದರ್ಶಕ ಪ್ರತಿಮೆಗಳ ಮೂಲಕ ವಾಸ್ತವವನ್ನು ಕಲಾತ್ಮಕವಾಗಿ ಚಿತ್ರಿಸಿದ` 80 ವರ್ಷ ವಯಸ್ಸಿನ ಕವಿಯನ್ನು ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ ಎಂದು  ಸ್ವೀಡಿಷ್ ಅಕಾಡೆಮಿ ಹೇಳಿದೆ.ಟ್ರಾನ್ಸ್‌ಟ್ರೋಮರ್ 1990ರಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದರು. ಅರ್ಧ ಪಾರ್ಶ್ವವಾಯುವಿನಿಂದ ಅವರು ಮಾತನಾಡಲು ಅಸಮರ್ಥರಾದರೂ ಬರೆಯುವುದನ್ನು ಬಿಡಲಿಲ್ಲ. ಮುಂದೆ 2004ರಲ್ಲಿ `ದಿ ಗ್ರೇಟ್ ಎನಿಗ್ಮಾ~ ಎಂಬ ಕವನ ಸಂಗ್ರಹ ವನ್ನು ಪ್ರಕಟಿಸಿದರು.ಪ್ರಶಸ್ತಿಯ ಜೊತೆಗೆ 15 ಲಕ್ಷ ಅಮೆರಿಕ ಡಾಲರ್ ಬಹುಮಾನಕ್ಕೆ ಟ್ರಾನ್ಸ್‌ಟ್ರೋಮರ್ ಪಾತ್ರರಾಗಿದ್ದಾರೆ.1974ರಲ್ಲಿ ಬಂದ `ಬಾಲ್ಟಿಕ್ಸ್~ ಹಾಗೂ ಅವರ ಪ್ರವಾಸಗಳ ವರ್ಣನೆಯಾಗಿರುವ 1966ರಲ್ಲಿ ಬಂದ `ವಿಂಡೋಸ್ ಅಂಡ್ ಸ್ಟೋನ್ಸ್~ ಟ್ರಾನ್ಸ್‌ಟ್ರೋಮರ್ ಅವರ ಪ್ರಸಿದ್ಧ ಬರಹಗಳಾಗಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry