ಶನಿವಾರ, ಮೇ 28, 2022
27 °C

ಸಾಹಿತ್ಯ ಮಾನಸ ಸರೋವರದ ನೀರಿನಂತೆ ತಿಳಿಯಾಗಿರಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾಹಿತ್ಯವು ಕಾಗೆಗಳು ಮೀಯುವ ಕೊಳಚೆ ನೀರಾಗಬಾರದು. ಮಾನಸ ಸರೋವರದಲ್ಲಿನ ತಿಳಿ ನೀರಿನಂತೆ ಶುಭ್ರವಾಗಿರಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ವಸಂತ ಪ್ರಕಾಶನವು ಸುರಾನ ಕಾಲೇಜಿನಲ್ಲಿ  ಭಾನುವಾರ ಆಯೋಜಿಸಿದ್ದ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ‘ನೆರಳು ಮತ್ತು ಇತರ ಆಯ್ದ ಕತೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

‘ನಾನು ಸಾಹಿತ್ಯದ ಬಗ್ಗೆ ಆಳವಾದ ಜ್ಞಾನ ಹೊಂದಿಲ್ಲ ಕಾರಣ ನನ್ನ ಕ್ಷೇತ್ರವೇ ಬೇರೆಯಾಗಿದೆ. ಆದರೆ ನಾನು ಕನ್ನಡ ಸಾಹಿತ್ಯದ ಪ್ರೇಮಿಯಾಗಿದ್ದಾನೆ ಎಂದರು. ನಂತರ ಮಾತನಾಡಿದ ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ‘ಹೊಸ ಸಾಹಿತ್ಯಗಳು ಕನ್ನಡದಲ್ಲಿ ರಚನೆಯಾಗುತ್ತಿರುವುದು ಸಂತಸದ ವಿಷಯ. ಆದರೆ ಅನೇಕ ಇಂಗ್ಲಿಷ್ ಪದಗಳು ಕನ್ನಡೀಕರಣವಾಗುತ್ತಿವೆ. ಅವುಗಳ ಬಳಕೆಗಾಗಿ ಪ್ರತ್ಯೇಕ ನಿಘಂಟು ರಚನೆ ಮಾಡಬೇಕು’ ಎಂದರು. ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜು, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಸಾಹಿತಿ ಡಾ. ಸುರೇಂದ್ರನಾಥ ಮಿಣಜಗಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.