ಬುಧವಾರ, ನವೆಂಬರ್ 20, 2019
26 °C

ಸಾಹಿತ್ಯ ಸಂಜೆಯಲ್ಲಿ ರಘುನಾಥ ರಾವ್ ಕೃತಿ ಸಂವಾದ

Published:
Updated:

ಸುಚಿತ್ರ ಕಲಾಕೇಂದ್ರದ ಸಾಹಿತ್ಯಸಂಜೆ ಕಾರ್ಯಕ್ರಮದಲ್ಲಿ ಶನಿವಾರ, ಏ.13ರಂದು ಸಂಜೆ 5.30ಕ್ಕೆ ಹಿರಿಯ ವಿಮರ್ಶಕ ಪ್ರೊ. ಡಿ.ರಘುನಾಥ ರಾವ್ ಅವರ ಇತ್ತೀಚಿನ ವಿಮರ್ಶಾ ಕೃತಿ `ಪರಿಪ್ರೇಕ್ಷ್ಯ' ಕುರಿತು ಪರಿಚಯ ಹಾಗೂ ಸಂವಾದ ಆಯೋಜಿಸಲಾಗಿದೆ. ಹಿರಿಯ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಮತ್ತು ಲೇಖಕ ಕೆ.ಸತ್ಯನಾರಾಯಣ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಪ್ರೊ.ಡಿ.ರಘುನಾಥರಾವ್ ಕೂಡಾ ಉಪಸ್ಥಿತರಿರುವರು.ಪ್ರೊ.ರಘುನಾಥ್ ರಾವ್: ಹರಿಹರ ತಾಲೂಕಿನ ಮಲೆಬೆನ್ನೂರು ಇವರ ಹುಟ್ಟೂರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರಾದ ಇವರು ದಕ್ಷಿಣ ಕನ್ನಡದ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿದವರು. 1965ರಲ್ಲಿ `ನವ್ಯಕಾವ್ಯ ಒಂದು ವಿವೇಚನೆ' ಎಂಬ ವಿಮರ್ಶಾ ಸಂಕಲನದಿಂದ ಆರಂಭಿಸಿ ಇದುವರೆಗೆ ಸುಮಾರು ಆರು ಸಾಹಿತ್ಯ ವಿಮರ್ಶಾ ಸಂಕಲನವನ್ನು ಹೊರತಂದಿದ್ದಾರೆ. ಇವರ ಇತ್ತೀಚಿನ ವಿಮರ್ಶಾ ಸಂಕಲನವೇ `ಪರಿಪ್ರೇಕ್ಷ್ಯ'.

ಸ್ಥಳ: ಸುಚಿತ್ರ ಕಿ.ರಂ.ನುಡಿಮನೆ, ನಂ.36, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ.  ಸಂಜೆ 5.30.

ಪ್ರತಿಕ್ರಿಯಿಸಿ (+)