ಬುಧವಾರ, ಮೇ 12, 2021
17 °C
ತಾಲ್ಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ

`ಸಾಹಿತ್ಯ ಸಮಾಜ ಮುಖಿಯಾಗಿರಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: `ಸಾಹಿತ್ಯ ಸಮಾಜ ಮುಖಿಯಾಗಿ ಇರಬೇಕೇ ಹೊರತು ಸಮಾಜಕ್ಕೆ ಕಂಟಕವಾಗಿರಬಾರದು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಜನರ ಕಲ್ಯಾಣಕ್ಕಾಗಿವೆ. ಅದರಂತೆ ಸಾಹಿತ್ಯವನ್ನು ಕೂಡ ಜನರ ಕಲ್ಯಾಣಕ್ಕೆ ಮೀಸಲಿಡಬೇಕು. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸುವ ಬೆಳೆಸುವ ಕಾರ್ಯ ಸರ್ವರಿಂದ ಆದಾಗ ಮಾತ್ರ ಮಾದರಿ ರಾಜ್ಯವಾಗಲು ಸಾಧ್ಯ' ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸ್ಥಳೀಯ ರಾಮಕಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದ ಸ್ವಾಮಿಜಿ ಮಾತನಾಡಿ, `ಕನ್ನಡಿಗರು ಸರ್ವರನ್ನು ಪ್ರೀತಿಸುವ ಸ್ವಾಭಾವವನ್ನು ಹೊಂದಿದವರಾಗಿದ್ದು, ಅನ್ಯ ಭಾಷೆಗಳನ್ನು ಸಲಭವಾಗಿ ಕನ್ನಡಿಗರು ಕಲಿಯುತ್ತಾರೆ. ಇಲ್ಲಿ ವಾಸಿಸುವ ಅನ್ಯ ಭಾಷಿಕರು ಗಾಳಿ, ನೀರು, ಆಹಾರ ಸೇವಿಸುವವರು ಕನ್ನಡವನ್ನು ಕಲಿತು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಿದಾಗ ಈ ಭೂಮಿಯ ಋಣ ತೀರಿಸಿದಂತಾಗುತ್ತದೆ' ಎಂದರು.

`ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆಮಾಡಿ ನಾಡಿನ ಸೇವೆ ಮಾಡಲು ಹೆಚ್ಚಿನ ಹೊರೆ ಹೊರಿಸಿದ್ದೀರಿ' ಎಂದು ಸಮ್ಮೇಳನದ ಸರ್ವಾಧ್ಯಕ್ಷ ಜೆ.ಎಂ.ಮಠದ ನುಡಿದರ.ವಿರಕ್ತಮಠದ ಗುರು ಬಸವಸ್ವಾಮೀಜಿ ನೇತೃತ್ವ ವಹಿಸಿದ್ದರು, ಬಿ.ಎನ್.ಪಾಟೀಲ, ಅಶೋಕ ಹೊಟ್ಟಿಗೌಡ್ರ, ಪ್ರೊ.ಎಂ.ಎಂ. ಖನ್ನೂರು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಾಸಣಗಿ, ಮಾಜಿ ಅಧ್ಯಕ್ಷ ಡಾ.ಕೆ.ಎಚ್.ಮುಕ್ಕಣ್ಣನವರ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ವಾಸಣ್ಣ ಕುಸಗೂರ, ಸಿದ್ದಣ್ಣ ಅತಡಕರ, ಶಿವಾನಂದ ಸಂಗಾಪುರ, ಚೂಡಾಮಣಿ, ಎ.ಬಿ.ರತ್ನಮ್ಮ,ಜಿ.ಜಿ.ಹೊಟ್ಟಿಗೌಡ್ರ, ಎಂ.ಎಂ.ಪಾಟೀಲ, ಪ್ರಭು ಹಲಗೇರಿ, ಅಜ್ಮನಿ, ಚಂದ್ರಶೇಖರ ಮಡಿವಾಳರ, ಸುರೇಶ ಕರೂರು, ನಿತ್ಯಾನಂದ ಕುಂದಾಪುರ, ಸಣ್ಣತಮ್ಮಪ್ಪ ಬಾರ್ಕಿ, ಶಶಿಕಲಾ ಮಾಗನೂರ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ತಾಲ್ಲೂಕಿಗೆ ಹೆಚ್ಚಿನ ಅಂಕಪಡೆದ ಮೂವರು ವಿದ್ಯಾರ್ಥಿಗಳಿಗೆ, ಪಿಯುಸಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಪಡೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.