ಗುರುವಾರ , ಏಪ್ರಿಲ್ 22, 2021
22 °C

ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಗರದಲ್ಲಿ ಜರುಗಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಲು ಒಪ್ಪಿಗೆ ನೀಡಿದರು.ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಸಭೆಯಲ್ಲಿ ನೌಕರ ಸಂಘದ ಪದಾಧಿಕಾರಿಗಳು ಒಂದು ದಿನದ ವೇತನದ ಜೊತೆಗೆ ಅಗತ್ಯ ಬಿದ್ದರೆ ಹೆಚ್ಚುವರಿ ನೆರವನ್ನು ಸಹ ಒದಗಿಸಲು ಸಿದ್ಧ ಎಂದು ಪ್ರಕಟಿಸಿದರು.ಸಮ್ಮೇಳನದ ಕೋಶಾಧ್ಯಕ್ಷ, ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ನೌಕರರ ಬೆಂಬಲ ಅಗತ್ಯವಾಗಿದೆ. ಸರ್ಕಾರ ಸಮ್ಮೇಳನಕ್ಕೆ ರೂ.1 ಕೋಟಿ ನೀಡಿದೆ. ಸಮ್ಮೇಳನಕ್ಕೆ ಅಂದಾಜು ರೂ.5 ಕೋಟಿ ಅಗತ್ಯವಿದೆ. ಎಲ್ಲ ನೌಕರರು ತನು, ಮನ, ಧನದೊಂದಿಗೆ ಸಹಕರಿಸಬೇಕು ಎಂದು ಕೋರಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸರ್ಕಾರಿ ನೌಕರರ ಒಕ್ಕೂಟ, ಆರೋಗ್ಯ ಇಲಾಖೆ, ಶಿಕ್ಷಕರ ಸಂಘ, ಡಿ ಗ್ರೂಪ್ ನೌಕರರ ಸಂಘ ಸೇರಿದಂತೆ ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳು, `ಒಂದು ದಿನದ ವೇತನ ನೀಡಲು ಯಾವುದೇ ಅಭ್ಯಂತರವಿಲ್ಲ. ಅಗತ್ಯ ಬಿದ್ದರೆ ಹೆಚ್ಚು ನೆರವನ್ನು ಒದಗಿಸಲು ಸಿದ್ಧ. ಈ ಕುರಿತಂತೆ ತಾಲ್ಲೂಕು ಪದಾಧಿಕಾರಿಗಳ ಸಭೆ ಕರೆದು, ಚರ್ಚಿಸಿ ಸಮ್ಮೇಳನದ ಯಶಸ್ಸಿಗೆ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇವೆ~ ಎಂದರು.ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮಾತನಾಡಿ, ಸಮ್ಮೇಳನಕ್ಕೆ ಸಂಘ-ಸಂಸ್ಥೆಗಳು, ದಾನಿಗಳು, ಸರ್ಕಾರಿ ನೌಕರರ ನೆರವು ಅತ್ಯವಶ್ಯ ವಾಗಿದೆ. ಸಮ್ಮೇಳನದ ಲೆಕ್ಕಪತ್ರವನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸ ಲಾಗುವುದು. ಒಂದು ರೂಪಾಯಿ ಸಹ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸಿಇಒ ಗುತ್ತಿ ಜಂಬುನಾಥ್, ಎಲ್ಲ ಗ್ರಾಮ ಪಂಚಾಯಿತಿಗಳ ಪ್ರಮುಖರ ಸಭೆ ಕರೆದು   ಚರ್ಚಿಸಲಾಗುವುದು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಲ್. ಶೆಡಶ್ಯಾಳ, ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಶಾಖೆಯ ಅಧ್ಯಕ್ಷ ಚಂದ್ರಶೇಖರ ಲೇಂಡಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಇಂಡಿ ಶಾಖೆಯ ಅಧ್ಯಕ್ಷ ಬಿ.ಕೆ. ಗೊಟ್ಯಾಳ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಹಕಾರ್ಯದರ್ಶಿ ಸಿ.ಟಿ. ಜತ್ತಿ, ಕೃಷಿ ಇಲಾಖೆ ನೌಕರರ ಸಂಘದ ಪದಾಧಿಕಾರಿ ಎನ್.ಆರ್. ಅಡ್ಡೋಡಗಿ, ತೋಟಗಾರಿಕೆ ಇಲಾಖೆ ನೌಕರರ ಒಕ್ಕೂಟದ ಎಂ.ಸಿ. ದೊಡಮನಿ, ರಾಜೇಂದ್ರ ಕಾವಿ, ನಬಿಲಾಲ ಹರನಾಳ,  ಫಯಾಜ ದೇಸಾಯಿ, ಶಿಕ್ಷಣ ಇಲಾಖೆಯ ನೌಕರರ ಸಂಘದ ಬಿ.ಆರ್. ತೇರದಾಳ, ಆರೋಗ್ಯ ಇಲಾಖೆ ಸಂಘದ ಸಂಗಪ್ಪ ಸೂರಪ್ಪ ಅಮನಾಳ, ಎಸ್.ಎನ್. ಅತ್ತಾರ, ವಾಣಿಜ್ಯ ತೆರಿಗೆ ಇಲಾಖೆ ನೌಕರರ ಸಂಘದ ಸುರೇಶ, ಎಂ.ಬಿ. ಹುಲ್ಲೂರ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಎಸ್. ಬಿರಾದಾರ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಎಸ್. ಅಥರ್ಗಾ, ಜಿಲ್ಲಾ ಆಸ್ಪತ್ರೆಯ ಅಶ್ವಿನಿಕುಮಾರ ಕೊಪ್ಪ, ತಹಶೀಲ್ದಾರ ರಾಜಶ್ರಿ ಜೈನಾಪುರ ಇತರರು ಉಪಸ್ಥಿತರಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.