ಭಾನುವಾರ, ನವೆಂಬರ್ 17, 2019
29 °C

ಸಾಹಿತ್ಯ ಸಮ್ಮೇಳನದಲ್ಲಿ ಇಂದು

Published:
Updated:

ಧ್ವಜಾರೋಹಣ ಕಾರ್ಯಕ್ರಮ

ರಾಷ್ಟ್ರಧ್ವಜ: ಶಾಸಕ ಎಸ್. ಚಿಕ್ಕಮಾದು. ನಾಡಧ್ವಜ: ತಹಶೀಲ್ದಾರ್ ಕೃಷ್ಣ ಸಾಹಿತ್ಯ ಪರಿಷತ್‌ನ ಧ್ವಜ: ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ.ಆರ್. ಮಹೇಶ್. ಸ್ಥಳ- ಶ್ರೀ ತಾತಯ್ಯ ಸಭಾ ಮಂಟಪ, ಶ್ರೀಕೃಷ್ಣ ಆಲನಹಳ್ಳಿ ವೇದಿಕೆ. ಬೆಳಿಗ್ಗೆ 8.ಸಮ್ಮೇಳನದ ಸರ್ವಾಧ್ಯಕ್ಷ ಪಂಡಿತ್ ನಾಗರಾಜಯ್ಯ ಅವರ ಮೆರವಣಿಗೆ: ಪೂರ್ಣಕುಂಭ ಹಾಗೂ ವಿವಿಧ ಜಾನಪದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ. ಉದ್ಘಾಟಕರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ರಮೇಶ್, ಮುಖ್ಯ ಅತಿಥಿಗಳು: ಪದ್ಮಾ ಶ್ರೀನಿವಾಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷ ಬಿ.ಎಂ. ಶಿವಣ್ಣ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಲಿಂಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಎಇಇ ಅಚ್ಯುತ್, ಎಇಇ ಮೋಹನ್‌ಕುಮಾರ್, ಎಇಇ ಶ್ರೀಕಂಠಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಎನ್. ವಿಜಯ್‌ಕುಮಾರ್. ಸ್ಥಳ- ಎಚ್.ಡಿ. ಕೋಟೆ ಪದವಿಪೂರ್ವ ಕಾಲೇಜು ಮುಂಭಾಗ, ಬೆಳಿಗ್ಗೆ 8.30.ಸಮಾರಂಭದ ಉದ್ಘಾಟನೆ

ಗಾನಸಿರಿ ಕಲಾ ತಂಡದಿಂದ ನಾಡಗೀತೆ ಹಾಗೂ ರೈತಗೀತೆ: ಸ್ವಾಗತ- ತಾಲ್ಲೂಕು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಚಿಕ್ಕಮಾದು. ಪ್ರಾಸ್ತಾವಿಕ ನುಡಿ-  ಮೈಸೂರು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ. ಚಂದ್ರಶೇಖರ್. ಉದ್ಘಾಟನೆ- ಪತ್ರಕರ್ತ ರಾಜಶೇಖರ ಕೋಟಿ. ಅಧ್ಯಕ್ಷತೆ: ಕವಯತ್ರಿ ಲತಾ ರಾಜಶೇಖರ್, ಸಮ್ಮೇಳನಾಧ್ಯಕ್ಷರ ನುಡಿ: ಹಿರಿಯ ವಿದ್ವಾಂಸ ಪಂಡಿತ್ ನಾಗರಾಜಯ್ಯ. ಸ್ಮರಣ ಸಂಚಿಕೆ ಬಿಡುಗಡೆ: ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜು.ಪುಸ್ತಕ ಮಳಿಗೆ ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ, ಸಾಂಸೃತಿಕ ಕಾರ್ಯಕ್ರಮ ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮುಖ್ಯ ಅತಿಥಿಗಳು: ಮಾಜಿ ಸಚಿವ ಎಂ. ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ, ಮಾಜಿ ಶಾಸಕ ಎಂ.ಪಿ. ವೆಂಕಟೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ, ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಸಿ. ಮಂಜುನಾಥ್, ಪದ್ಮಾ ಬಸವರಾಜು, ಎಚ್.ಆರ್. ಭಾಗ್ಯಲಕ್ಷ್ಮೀ ನಿಂಗರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ. ಮಹೇಂದ್ರ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ. ಉಪಸ್ಥಿತಿ: ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಹಾಗೂ ವಕೀಲ ಡಿ.ಆರ್. ಮಹೇಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ವೈ.ಡಿ. ರಾಜಣ್ಣ. ನಿರೂಪಣೆ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಆರ್. ಶಿವರಾಮ್, ನಿರ್ವಹಣೆ: ವಕೀಲ ಜಿ.ಎನ್. ನಾರಾಯಣಗೌಡ,

ಸಮ್ಮೇಳನಾಧ್ಯಕ್ಷರ ಪರಿಚಯ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಕನ್ನಡ ಪ್ರಮೋದ್. ವಂದನಾರ್ಪಣೆ: ವಕೀಲ ಡಿ.ಆರ್. ಮಹೇಶ್. ಜಗದ್ಗುರು ಶ್ರೀ ಶಿವರಾತ್ರೀಶ್ವರ ಕಲ್ಯಾಣ ಮಂಟಪ ಎಚ್.ಡಿ. ಕೋಟೆ: ಬೆಳಿಗ್ಗೆ 10.30.ಗೋಷ್ಠಿ-1: ತಾಲ್ಲೂಕು ದರ್ಶನ

ಅಧ್ಯಕ್ಷತೆ: ಪುರಸಭೆ ಮಾಜಿ ಅಧ್ಯಕ್ಷ ರಂಗಯ್ಯಂಗಾರ್, ಅಧ್ಯಕ್ಷತೆ: ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಪ್ರೊ. ಕೆ.ಪಿ. ಬಸವೇಗೌಡ, ತಾಲ್ಲೂಕು ಸಾಹಿತ್ಯದ ಮಂಡನೆ: ಉಪನ್ಯಾಸಕ ಎಂ.ಎನ್. ರವಿಶಂಕರ್. ಬುಡಕಟ್ಟು ಜನಾಂಗದಿಂದ ಕಲಿಯಬೇಕಾದ ಅಂಶ ದವಿವರಣೆ: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯ. ಉಪಸ್ಥಿತಿ: ಮೈಸೂರು ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ. ಮಧ್ಯಾಹ್ನ-2.ಗೋಷ್ಠಿ-2: ಕನ್ನಡ ಭಾಷೆ ಮತ್ತು ಗಡಿ ಸಮಸ್ಯೆ

ಗಡಿನಾಡು ಸಮಸ್ಯೆ ಹಾಗೂ ಅಭಿವೃದ್ಧಿಯ ಬಗ್ಗೆ ವಿಷಯ ಮಂಡನೆ: ಸಾಮಾಜಿಕ ಚಿಂತಕ ಚಾ. ನಂಜುಂಡಮೂರ್ತಿ. ಕನ್ನಡ ಬಳಸಿ ಉಳಿಸಿ ಬೆಳೆಸುವುದರ ಬಗ್ಗೆ ವಿಷಯ ಮಂಡನೆ: ಮೈಸೂರು ವಿಶ್ವ ವಿದ್ಯಾಲಯ ಪ್ರಸಾರರಂಗದ ಉಪನಿರ್ದೇಶಕ ಸ.ರ. ಸುದರ್ಶನ್. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಾಹಿತ್ಯದ ಬಗ್ಗೆ ವಿಷಯ ಮಂಡನೆ: ಧಾರವಾಡ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ. ಮುಖ್ಯ ಅತಿಥಿಗಳು: ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವರಾಜಪ್ಪ, ಪ್ರಾ.ಸ.ಭೂ.ಅ. ಬ್ಯಾಂಕ್ ಅಧ್ಯಕ್ಷ ಬಿ.ಎಂ. ಶಂಕರಲಿಂಗೇಗೌಡ, ಎಪಿಎಂಸಿ ಅಧ್ಯಕ್ಷ ಪಿ. ಮಹದೇವು, ರೈತ ಮುಖಂಡ ಹೊ.ಕೆ. ಮಹೇಂದ್ರ, ಪಟ್ಟಣ ಪಂಚಾಯತಿ ಸದಸ್ಯ ನರಸಿಂಹಮೂರ್ತಿ, ಟಿಎಪಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜು, ಜಿಲ್ಲಾ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಕೆ.ಎಸ್. ಶಿವರಾಮು, ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಮ್ಮಣ್ಣೇಗೌಡ, ಸರಗೂರು ಬ್ಲಾಕ್ ಜನತಾದಳ ಅಧ್ಯಕ್ಷ ರವಿ. ಸ್ವಾಗತ: ತಾಲ್ಲೂಕು ಸಾಹಿತ್ಯ ಪರಿಷತ್‌ನ ಸದಸ್ಯ ಸುರೇಂದ್ರ ಡಿ. ಗೌಡ, ನಿರೂಪಣೆ: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಎಸ್.ಪಿ. ಪ್ರಕಾಶ್, ನಿರ್ವಹಣೆ: ಪತ್ರಕರ್ತ ಎಂ.ಎಲ್. ರವಿಕುಮಾರ್,

ವಂದನಾರ್ಪಣೆ: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಕಿರಣ್, ಮಧ್ಯಾಹ್ನ-3.ಕವಿ ಸಮ್ಮಿಲನ: ಕವಿಗೋಷ್ಠಿ

ಸಾನ್ನಿಧ್ಯ: ಬಿಡಗಲು ವಿರಕ್ತ ಮಠದ ಮಹದೇವಸ್ವಾಮೀಜಿ, ಉದ್ಘಾಟನೆ: ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಪಕ ಎಚ್.ಜೆ. ಭೀಮೇಶ್. ಅಧ್ಯಕ್ಷತೆ: ಹಿರಿಯ ಸಾಹಿತಿ ಸ.ಚ. ಮಹದೇವನಾಯಕ, ಉಪಸ್ಥಿತಿ: ಮಹಿಳಾ ಮುಖಂಡರಾದ ಎಸ್.ಆರ್. ಜಯಮಂಗಳ, ಉದ್ಯಮಿ ಎಸ್.ಬಿ. ಸತೀಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ. ಬಸವರಾಜು, ವೈದ್ಯ ಕೆ.ಜೆ. ರಾಮಕೃಷ್ಣೇಗೌಡ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್.ಎಂ. ನಾಗರಾಜು, ಮಾಜಿ ಮಂಡಲ ಪ್ರಧಾನ ಎಚ್. ದೇವದಾಸ್.ಕವಿಗಳು: ಸಿದ್ದಾಚಾರ್, ದೊಡ್ಡಸ್ವಾಮಿ, ಎಸ್.ಡಿ. ವಾಸು, ಜೆ.ವಿ. ನರಸಿಂಹಪ್ರಸಾದ್, ಎಸ್. ಕಿರಣ್, ಅಂಕನಹಳ್ಳಿ ಕುಮಾರ್, ಬಿ.ವಿ. ಶ್ರೀನಿವಾಸ್, ಸರಗೂರು ಕೃಷ್ಣಮೂರ್ತಿ, ಉಮಾ ಸುಶಿಪ್ರಾ, ಚೇತನ ಕುಮಾರ್, ಎಸ್. ನಾಗರಾಜು, ಎಂ.ಎನ್. ರವಿಕುಮಾರ್. ಸಂಜೆ- 4.ಸಮಾರೋಪ ಸಮಾರಂಭ

ಸಾನ್ನಿಧ್ಯ: ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮಿಜಿ, ಅಧ್ಯಕ್ಷತೆ: ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು, ಉಪಸ್ಥಿತಿ: ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ಮೈಸೂರಿನ ಕು.ಕ.ಅ. ಸಂಸ್ಥೆಯ ಪ್ರಾಧ್ಯಪಕ ಡಾ. ಕಬ್ಬಿನಾಲೆ ವಸಂತ ಭಾರಧ್ವಜ್, ಪಂಡಿತ್ ನಾಗರಾಜಯ್ಯ ಅವರಿಂದ ಅಧ್ಯಕ್ಷರ ನುಡಿ. ಗಣ್ಯರಿಗೆ ಅಭಿನಂದನೆ: ಸಂಸದ ಆರ್.ಧ್ರುವನಾರಾಯಣ್.ಸಾಧಕರಿಗೆ ಸನ್ಮಾನ:

ಡಾ. ಸಿ.ಎನ್. ಮೃತ್ಯುಂಜಯಪ್ಪ (ಸಮಾಜ ಸೇವೆ), ಡಾ.ಎನ್. ಚೆಲುವೇಗೌಡ (ವೈದ್ಯಕೀಯ), ವಿಲಿಯಂ ಡಿಸೋಜ (ಸಾಮಾಜಿಕ ಸೇವೆ), ಕೆ.ಪಿ. ಸಿದ್ದಪ್ಪ (ಯಕ್ಷಗಾನ), ರಾಮೇನಹಳ್ಳಿ ಮಹೇಶ್ (ಕೃಷಿ), ರಾಜೇಶ್ (ಕಿರುತೆರೆ ಹಾಗೂ ನಟನೆ), ಜಿ.ಎಂ. ರಕ್ಷಿತ್‌ಗೌಡ (ಭರತನಾಟ್ಯ), ಮೈಮುನ್ನಿಸಾಬೇಗಂ (ಶಿಕ್ಷಣ), ಎಸ್.ಆರ್. ನಾಗರಾಮ್ (ಪತ್ರಿಕಾರಂಗ), ನಂದಕುಮಾರ್ ಶೈಲಿ (ಛಾಯಾಗ್ರಹಣ), ಬಿ.ಆರ್. ವೆಂಕಟಪ್ಪ (ರಂಗಭೂಮಿ), ಲೀಲಾವತಿ ರಾಮಕೃಷ್ಣ (ಸಾಹಿತ್ಯ), ಸಿದ್ದಯ್ಯ ಸವ್ವೆ (ಜಾನಪದ ಗಾಯನ), ಚಿಕ್ಕನಾಯಕ (ಕ್ರೀಡೆ), ಗೂಳಿಕಟ್ಟೆ ಹನುಮಂತನಾಯಕ್ (ಕ್ರೀಡೆ), ಸಂಸ್ಕೃತಿ ಸುಬ್ರಹ್ಮಣ್ಯ (ಪ್ರಕಾಶಕರು), ರಂಗಶೆಟ್ಟಿ (ಹರಿಕಥೆ), ರಾಮಚಂದ್ರು (ಕಲಾವಿದರು).ಮುಖ್ಯ ಅತಿಥಿಗಳು: ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ಎಂ. ಚಿಕ್ಕಣ್ಣೇಗೌಡ, ರಾಜಲಕ್ಷ್ಮೀ, ನಂದಿನಿ ಚಂದ್ರಶೇಖರ್, ಮಾಜಿ ಮಂಡಲ ಪಂಚಾಯಿತಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಕೋಟೆ ಬ್ಲಾಕ್ ಜನತಾದಳ ಅಧ್ಯಕ್ಷ ಸಿ.ವಿ. ನಾಗರಾಜು, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಯ್ಯ, ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಸೋಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುಕೋಟೆ. ನಿರೂಪಣೆ: ಡಿ.ಎಸ್. ನಿಂಗರಾಜು, ಸ್ವಾಗತ ಬಿ.ಎಲ್. ದಯಾನಂದ್, ನಿರ್ವಹಣೆ : ಎನ್.ಎಸ್. ಕೃಷ್ಣ, ವಂದನಾರ್ಪಣೆ ಶಿಕ್ಷಕ ನಾಗೇಶ್.ಆಹಾ... ಸವಿಸವಿ ರುಚಿರುಚಿ

ಬೆಳಿಗ್ಗೆ: ಸಾವಿರ ಜನರಿಗೆ ಉಪ್ಪಿಟ್ಟು, ಕೇಸರಿಬಾತ್, ಚಹಾ ಮತ್ತು ಕಾಫಿ.

ಮಧ್ಯಾಹ್ನ: 2ಸಾವಿರ ಜನರಿಗೆ ಊಟ- ಅನ್ನ ಸಾಂಬರ್, ಪಲ್ಯ, ಪಾಯಸ, ಲಾಡು, ಬರ್ಫಿ.

ಸಂಜೆ: ಚಹಾ, ಬಿಸ್ಕತ್ಹೆಮ್ಮೆಯ ಪುತ್ರ ಎಂ.ವೆಂಕಟಕೃಷ್ಣಯ್ಯ (ತಾತಯ್ಯ)

ಎಚ್.ಡಿ.ಕೋಟೆಯ ಹೆಮ್ಮೆಯ ಪುತ್ರರಲ್ಲಿ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಪ್ರಮುಖರು. ಮೈಸೂರು ಆಸ್ಥಾನ ಪಂಡಿತರಾಗಿ, ಶಿಕ್ಷಣ ಪ್ರೇಮಿಗಳಾಗಿ, ಪತ್ರಕರ್ತರಾಗಿ, ರಾಜಕೀಯ ಮುತ್ಸದ್ದಿಯಾಗಿ, ಸಾಹಿತಿ, ಸಮಾಜ ಸುಧಾರಕರಾಗಿ ಅವರು ಸಲ್ಲಿಸಿದ ಸೇವೆ ಚಿರಸ್ಥಾಯಿ. ಮರಿಮಲ್ಲಪ್ಪ ಶಾಲೆ, ಶಾರದಾವಿಲಾಸ ಹೈಸ್ಕೂಲು, ಸದ್ವಿದ್ಯಾ ಪಾಠಶಾಲೆ, ಮಹಾರಾಣಿ ಬಾಲಿಕಾ ಪಾಠಶಾಲೆ, ಹಿಂದೂ ಮಿಷನ್, ವಿಧವೆಯರಿಗಾಗಿ ವೋಕೇಶನ್ ಇನ್‌ಸ್ಟಿಟ್ಯೂಟ್, ಅನಾಥಾಲಯ, ಬ್ರಾಹ್ಮಣ ವಿದ್ಯಾರ್ಥಿ ಸಂಘ, ಪತ್ರಿಕೋದ್ಯಮ ಸಂಘ, ಮಲೆನಾಡು ಮಹಾಸಭೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಹತ್ತಾರು ಸಂಸ್ಥೆಗಳ ವಿಕಾಸದಲ್ಲಿ ತಾತಯ್ಯ ಅವರದು ಮುಂಚೂಣಿ ವ್ಯಕ್ತಿತ್ವ.

ಈ ಹೆಮ್ಮೆಯ ಪುತ್ರನ ಹೆಸರನ್ನು ಸಾಹಿತ್ಯ ಸಮ್ಮೇಳನದ ಸಭಾಮಂಟಪಕ್ಕೆ ಇಡುವ ಮೂಲಕ ಗೌರವ ಸೂಚಿಲಾಗುತ್ತಿದೆ.

ಪ್ರತಿಕ್ರಿಯಿಸಿ (+)