ಮಂಗಳವಾರ, ಮೇ 11, 2021
26 °C

`ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಮನವಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ನಿಡಗುಂದಿಯಲ್ಲಿ ನಡೆಯುವ ಬಸವನಬಾಗೇವಾಡಿ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರು ಪಾಲ್ಗೊಂಡು ಸಮ್ಮೇಳನ ಯಶಸ್ವಿಗೆ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಹೇಳಿದರು.ನಿಡಗುಂದಿಯಲ್ಲಿ ಈಚೆಗೆ ಜರುಗಿದ ನಿಡಗುಂದಿ ವಲಯ ದೈಹಿಕ ಶಿಕ್ಷಕರ, ಮುಖ್ಯೋಪಾಧ್ಯಾಯರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಗೆ ಕಲಾ ಮೆರಗು ನೀಡುವ ನಿಟ್ಟಿನಲ್ಲಿ ನಿಡಗುಂದಿ ಸುತ್ತಮುತ್ತಲಿನ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಸ್ಥಬ್ದ ಚಿತ್ರ ಇಲ್ಲವೇ ವಿವಿಧ ಕವಿಗಳ, ಕನ್ನಡ ಪರ ಹೋರಾಟಗಾರರ ಛದ್ಮವೇಶ ಧರಿಸಿ ಸಿದ್ಧಗೊಳಿಸುವಂತೆ ಶಾಲೆಯ ಮುಖ್ಯಸ್ಥರು ಗಮನ ಹರಿಸಬೇಕು ಎಂದರು.ಇದು ಕನ್ನಡ ನಾಡಿನ ಹಬ್ಬವಾಗಿದ್ದು, ನಾಡಿನ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಶಿಕ್ಷಕರು, ದೈಹಿಕ ಶಿಕ್ಷಕರು, ಮುಖ್ಯಗುರುಗಳು, ಸಿ.ಆರ್.ಪಿಗಳು ಕಾರ್ಯನಿರ್ವಹಿಸಬೇಕು, ಸಮ್ಮೇಳನದಲ್ಲಿ ಯಾವುದೇ ಅಡೆತಡೆ ಬಾರದಂತೆ ಸಮ್ಮೇಳನದಲ್ಲಿ ಎಲ್ಲಾ ಹಂತದಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಬಿಇಓ ಮನವಿ ಮಾಡಿಕೊಂಡರು. ಮೆರವಣಿಗೆಯನ್ನು ಶಿಸ್ತುಬದ್ಧಗೊಳಿಸಲು ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದರು.ಸ್ಥಳೀಯ ಪ್ರೌಢಶಾಲೆಯ ಒಂಬತ್ತು ಮತ್ತು ಹತ್ತನೇ ತರಗತಿ ಮಕ್ಕಳು ಭಾಗವಹಿಸಬೇಕು, ಮೆರವಣಿಗೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು, ಅಲ್ಲದೇ ವಿದ್ಯಾರ್ಥಿನಿಯರು ಶಾಲಾ ಸಮೀಪದ ಮೆರವಣಿಗೆ ಹಾಯ್ದು ಹೋಗುವ ರಸ್ತೆಗೆ ಸಮೀಪ ಗಮನಸೆಳೆಯುವಂತೆ ರಂಗೋಲಿ ಹಾಕುವ ನಿಟ್ಟಿನಲ್ಲಿ ಶಿಕ್ಷಕರು ಸಿದ್ಧತೆ ಮಾಡಿಕೊಳ್ಳಲು ಬಿಇಒ ಮನವಿ ಮಾಡಿದರು.ಸಾಂಸ್ಕೃತಿಕ ಕಾರ್ಯಕ್ರಮ: ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿಡಗುಂದಿ ಪಟ್ಟಣದ ಪ್ರತಿ ಶಾಲೆಯಿಂದ ಒಂದು ಕನ್ನಡ ಪರ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಬೇಕು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.