ಸಾಹಿತ್ಯ ಸಮ್ಮೇಳನ: ಲೇಖನ ಆಹ್ವಾನ

7

ಸಾಹಿತ್ಯ ಸಮ್ಮೇಳನ: ಲೇಖನ ಆಹ್ವಾನ

Published:
Updated:

ಮಡಿಕೇರಿ: ಕೊಡಗಿನಲ್ಲಿ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಬರಹಗಾರರ ಸುಮಾರು 25 ಪುಸ್ತಕಗಳನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬರಹಗಾರರು ತಮ್ಮ ಆಯ್ಕೆಯ ವಿಷಯದ ಮೇಲೆ ಪುಸ್ತಕವನ್ನು ಬರೆಯಬಹುದು. ಎ 4 ಅಳತೆಯ, 100 ಪುಟಗಳಿಗಿಂತ ಕಡಿಮೆ ಇಲ್ಲದಂತೆ ಬರೆದ ಪುಸ್ತಕದ ಕಂಪ್ಯೂಟರ್ ಪ್ರತಿ (ಡಿಟಿಪಿ) ಹಾಗೂ ಸಿಡಿ ಪ್ರತಿಗಳನ್ನು ಆಯ್ಕೆಗೆಂದು ಕಳುಹಿಸಿಕೊಡಲು ಸೂಚಿಸಲಾಗಿದೆ.ಬರಹಗಾರರು ಮೊದಲಿಗೆ ತಾವು ಆರಿಸಿದ ವಿಷಯವನ್ನು ಸೆ.10ರೊಳಗೆ ತಮ್ಮ ಹೆಸರು, ವಿಳಾಸ ಸಹಿತ ಜಿಲ್ಲಾ ಕಸಾಪ ಕಚೇರಿಗೆ ಕಳುಹಿಸಿಕೊಡಬೇಕು.ವಿಷಯಗಳು ಇಂತಿವೆ:

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡಗಿನ ಪಾತ್ರ, ಮಹಿಳಾ ಬರಹಗಾರರ ಕಥಾಗುಚ್ಛ, ಕೊಡಗಿನಲ್ಲಿ ಕೃಷಿ, ತಂತ್ರಜ್ಞಾನ, ಜೀವ ವೈವಿದ್ಯ, ಕರ್ನಾಟಕ ಮೂಲದ ಭಾಷೆಗಳ ಕವನಗಳು (ಕನ್ನಡ, ಕೊಂಕಣಿ, ಕೊಡವ, ತುಳು, ಬ್ಯಾರಿ, ಅರೆಭಾಷೆ), ಕಥಾಸಂಕಲನ (ಜಿಲ್ಲೆಯ ಕಥೆಗಾರರ ಕಥೆಗಳ ಸಂಕಲನ), ಕೊಡಗಿನ ಗ್ರಾಮೀಣ ಜನರ ಬದುಕು ಸಂಸ್ಕೃತಿ (ಉಡುಗೆ ತೊಡುಗೆ, ಆಹಾರ ಪದ್ಧತಿ ಜನಪದ ಮತ್ತು ಸಾಂಸ್ಕೃತಿಕ ಪರಂಪರೆ).ಕೊಡಗಿನ ಇತಿಹಾಸ (ಕೊಡಗು ರಾಜ್ಯವಾಗಿದ್ದ ಸಂದರ್ಭ ಸೇರಿದಂತೆ), ಕನ್ನಡ ಸಾಹಿತ್ಯ ಲೋಕಕ್ಕ ಕೊಡಗಿನ ಕೊಡುಗೆ (ಶಿಕ್ಷಕರ ಕೊಡುಗೆ, ಪತ್ರಕರ್ತರ ಕೊಡುಗೆಗಳನ್ನು ಪ್ರತ್ಯೇಕವಾಗಿ ಬರೆಯಬೇಕು), ಸೈನ್ಯ ಮತ್ತು ಕೊಡಗು, ಕೊಡಗಿನಲ್ಲಿ ಕನ್ನಡದ ಸಂಘ ಸಂಸ್ಥೆಗಳು ಮತ್ತು ಕನ್ನಡಪರ ಚಳವಳಿಗಳು (ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ಚಟುವಟಿಕೆಗಳನ್ನು ಮುಖ್ಯವಾಗಿಟ್ಟುಕೊಂಡು).ಕೊಡಗಿನ ಕ್ರೀಡಾಲೋಕ, ಮಡಿಕೇರಿಯಲ್ಲಿ ನಡೆದ 18ನೇ ಮತ್ತು 54ನೇ ಸಾಹಿತ್ಯ ಸಮ್ಮೇಳನಗಳ ನೋಟ, ಕೊಡಗಿನ ಧಾರ್ಮಿಕ ಕೇಂದ್ರಗಳು, ವೈಯಕ್ತಿಕ ಕಥಾ ಸಂಕಲನ, ಕಾದಂಬರಿ, ನಾಟಕ, ನಾಟಿ ವೈದ್ಯ ಪದ್ಧತಿ/ವನೌಷಧಿಗಳು, ಕೊಡಗಿನ ಭಾಷಿಕ ಜನಾಂಗಗಳು, ಕೊಡಗಿನ ವಾಣಿಜ್ಯ ಬೆಳೆಗಳು, ರಾಷ್ಟ್ರಮಟ್ಟದಲ್ಲಿ ಕೊಡಗಿನ ಹಿರಿಮೆ ಮೆರೆದವರು, ಗೌರಮ್ಮನ ಕಥೆಗಳಲ್ಲಿ ಪರಿವರ್ತನೆಯ ಚಿಂತನೆಗಳು, ಭಾರತೀಸುತರ ಕೃತಿಗಳಲ್ಲಿ ವಸ್ತು ವೈವಿದ್ಯ.ಆಯ್ಕೆ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು ಮಾತ್ರ ಪ್ರಕಟಿಸಲಾಗುವುದು. ಈ ಕುರಿತ ಅಂತಿಮ ತೀರ್ಮಾನ ಆಯ್ಕೆ ಸಮಿತಿಯದ್ದೇ ಆಗಿರುತ್ತದೆ.ಡಿಟಿಪಿ ಪ್ರತಿ ಹಾಗೂ ಸಿಡಿಗಳನ್ನು 2013ರ ಅಕ್ಟೋಬರ್ 7ರ ಒಳಗೆ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೋಟೆ ಆವರಣ, ಮಡಿಕೇರಿ ಇಲ್ಲಿಗೆ ತಲುಪಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌ. ಕಾರ್ಯದರ್ಶಿ ಬಿ.ಎ. ಷಂಶುದ್ದೀನ್ ಅವರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry