ಸಾಹಿತ್ಯ ಸಮ್ಮೇಳನ: ಸಂಚಾರ ಬದಲಾವಣೆ

5

ಸಾಹಿತ್ಯ ಸಮ್ಮೇಳನ: ಸಂಚಾರ ಬದಲಾವಣೆ

Published:
Updated:

 ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಬಸವನಗುಡಿ ಸುತ್ತಮುತ್ತ ಪ್ರದೇಶದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಸಂಚಾರ ಮಾರ್ಗದಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.

ಕೆಂಪೇಗೌಡ ರಸ್ತೆ ಕಡೆ ಸಂಚರಿಸುವ ವಾಹನಗಳು ಈ ಕೆಳಕಂಡ ಮಾರ್ಗದಲ್ಲಿ ಸಾಗಬೇಕು.ಮಿನರ್ವ ವೃತ್ತ, ಮಾವಳ್ಳಿ ಟ್ಯಾಂಕ್‌ಬಂಡ್ ರಸ್ತೆ, ಕುಂಬಾರಗುಡಿ ರಸ್ತೆ ಮೂಲಕ ಸಾಗಿ ಪುರಭವನದ ಮುಂದೆ ಸಂಚರಿಸಬೇಕು. ಕೊಂಡಜ್ಜಿ ಬಸಪ್ಪ ವೃತ್ತ, ಕಲಾಸಿಪಾಳ್ಯ ಮುಖ್ಯ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಮೆಡಿಕಲ್ ಕಾಲೇಜು ವೃತ್ತದ ಮೂಲಕ ಸಾಗಿ ಸಿಟಿ ಮಾರುಕಟ್ಟೆ ತಲುಪಿ ಕೆಂಪೇಗೌಡ ರಸ್ತೆಗೆ ಸಾಗಬಹುದು. ಲಾಲ್‌ಬಾಗ್ ಪಶ್ಚಿಮ ದ್ವಾರದ ಕಡೆಯಿಂದ ಬರುವವರು ಎಂಎನ್‌ಕೆ ರಾವ್ ರಸ್ತೆ, ಗಾಂಧಿ ಬಜಾರ್, ರಾಮಕೃಷ್ಣ ಆಶ್ರಮ ವೃತ್ತ, ಬಸವನಗುಡಿ ರಸ್ತೆ, ಬಜಾರ್ ಸ್ಟ್ರೀಟ್, ಚಾಮರಾಜಪೇಟೆ ಒಂದನೇ ಮುಖ್ಯ ರಸ್ತೆ ಮೂಲಕ ಸಾಗಿ ಸಿರ್ಸಿ ವೃತ್ತದಿಂದ ಮುಂದಕ್ಕೆ ಸಂಚರಿಸಬೇಕು.ಉತ್ತರಹಳ್ಳಿ ಕಡೆಯಿಂದ ಬರುವ ವಾಹನಗಳು ಕದಿರೇನಹಳ್ಳಿ ತಿರುವು, ಚನ್ನಮ್ಮ ವೃತ್ತ ಎಡ ತಿರುವು, ಕಾಮಾಕ್ಯ ವೃತ್ತ, ಹೊರ ವರ್ತುಲ ರಸ್ತೆ ಮುಖಾಂತರ ಮೈಸೂರು ರಸ್ತೆ ಕಡೆ ಸಂಚರಿಸಿ ಮಾಗಡಿ ರಸ್ತೆ ಅಥವಾ ಗೂಡ್ಸ್ ಶೆಡ್ ರಸ್ತೆ ಮುಖಾಂತರ ಮೆಜೆಸ್ಟಿಕ್ ಸೇರಬೇಕು. ಕನಕಪುರ ವರ್ತುಲ ರಸ್ತೆ, ಬೇಂದ್ರೆ ವೃತ್ತ, ಕದಿರೇನಹಳ್ಳಿ ಪೆಟ್ರೋಲ್ ಬಂಕ್, ಚನ್ನಮ್ಮ ವೃತ್ತ, ಮೈಸೂರು ರಸ್ತೆಯಲ್ಲಿ ಸಾಗಬೇಕು.ಕೆ.ಆರ್ ರಸ್ತೆಯ ಕಡೆಯಿಂದ ಬರುವ ವಾಹನಗಳು ಭಾರತಿ ನರ್ಸಿಂಗ್ ಹೋಂ, ಡಿ.ಎಂ. ಜಂಕ್ಷನ್, ಗಾಂಧಿ ಬಜಾರ್, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಬಜಾರ್ ಸ್ಟ್ರೀಟ್, ಚಾಮರಾಜಪೇಟೆ ಒಂದನೇ ಮುಖ್ಯ ರಸ್ತೆಯಲ್ಲಿ ಬಂದು ಸಿರ್ಸಿ ವೃತ್ತದ ಮೂಲಕ ಕೆಂಪೇಗೌಡ ರಸ್ತೆ ಸೇರಬೇಕು.ಕಸ್ತೂರಬಾ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಜೆ.ಸಿ. ರಸ್ತೆ, ಭಾರತ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಊರ್ವಶಿ ಜಂಕ್ಷನ್ ಮೂಲಕ ಸಿದ್ದಯ್ಯ ರಸ್ತೆ ತಲುಪಿ ಎಡ ತಿರುವು ಪಡೆದು ಕೆ.ಎಚ್ ರಸ್ತೆ ಮೂಲಕ ಸಾಗಬೇಕು. ಮಿನರ್ವ, ಲಾಲ್‌ಬಾಗ್ ಫೋರ್ಟ್ ರಸ್ತೆ, ಲಾಲ್‌ಬಾಗ್ ಮುಖ್ಯ ದ್ವಾರ, ಕೆ.ಎಚ್ ರಸ್ತೆ ಮೂಲಕ ಮುಂದಕ್ಕೆ ಹೋಗಬೇಕು. ಸೌತ್ ಎಂಡ್ ವೃತ್ತ, ಮಾಧವನ್ ಉದ್ಯಾನ (ಎಡತಿರುವು), ಟಿ. ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್, ಸಿದ್ದಾಪುರ ಜಂಕ್ಷನ್ (ಎಡ ತಿರುವು), ಹೊಸೂರು ರಸ್ತೆ (ಬಲ ತಿರುವು) ಮೂಲಕ ಕೆ,ಎಚ್ ರಸ್ತೆ ಸೇರಬೇಕು.ಜೆ.ಪಿ. ನಗರ ಕಡೆಯಿಂದ ಬರುವ ವಾಹನಗಳು ಕೆನರಾ ಬ್ಯಾಂಕ್ ಜಂಕ್ಷನ್, ಸಿಂಡಿಕೇಟ್ ಬ್ಯಾಂಕ್ ಜಂಕ್ಷನ್, ಕುಚಲಾಂಬ (ಬಲ ತಿರುವು), ಟಿ. ಮರಿಯಪ್ಪ ರಸ್ತೆ, ಅಶೋಕ ಪಿಲ್ಲರ್, ಸಿದ್ದಾಪುರ ಜಂಕ್ಷನ್ (ಎಡ ತಿರುವು), ಹೊಸೂರು ರಸ್ತೆ (ಬಲ ತಿರುವು), ಕೆ.ಎಚ್ ರಸ್ತೆ.ಅತಿಗಣ್ಯರ ಮಾರ್ಗ: ಸಮ್ಮೇಳನದಲ್ಲಿ ಭಾಗವಹಿಸುವ ಅತಿ ಗಣ್ಯ ವ್ಯಕ್ತಿಗಳು ಹಡ್ಸನ್ ವೃತ್ತ, ದೇವಾಂಗ ರಸ್ತೆ, ಲಾಲ್‌ಬಾಗ್ ಪಶ್ಚಿಮ ದ್ವಾರ, ಶೇಷ ಮಹಲ್ ವೃತ್ತ, ನ್ಯಾಷನಲ್ ಕಾಲೇಜು ಮೇಲು ಸೇತುವೆ ಡೌನ್ ರ್ಯಾಂಪ್, ನ್ಯಾಷನಲ್ ಕಾಲೇಜು ವೃತ್ತ, ಪಂಪ ಮಹಾಕವಿ ರಸ್ತೆ ಮಾರ್ಗನ್ನು ಬಳಸಬೇಕು.ನಿರ್ಗಮನ ಮಾರ್ಗ: ಕಾರ್ಯಕ್ರಮದಿಂದ ನಿರ್ಗಮಿಸುವವರು ಪಂಪ ಮಹಾಕವಿ ರಸ್ತೆ, ನ್ಯಾಷನಲ್ ಕಾಲೇಜು ವೃತ್ತ, ಸಮಾನಾಂತರ ರಸ್ತೆ, ಸಜ್ಜನ್‌ರಾವ್ ವೃತ್ತ, ಲಾಲ್‌ಬಾಗ್ ಪಶ್ಚಿಮ ದ್ವಾರ, ಜಯಚಾಮರಾಜೇಂದ್ರ ರಸ್ತೆ ಮೂಲಕ ಸಾಗಬೇಕು.

ಸಾರ್ವಜನಿಕರ ಮಾರ್ಗ: ಸಮ್ಮೇಳನಕ್ಕೆ ಬರುವ ಸಾರ್ವಜನಿಕರು ಹಡ್ಸನ್ ವೃತ್ತ, ದೇವಾಂಗ ರಸ್ತೆ, ಲಾಲ್‌ಬಾಗ್ ಮುಖ್ಯ ದ್ವಾರ, ಕೃಂಬಿಗಲ್ ರಸ್ತೆ, ಲಾಲ್‌ಬಾಗ್ ಪಶ್ಚಿಮ ದ್ವಾರ, ಶೇಷ ಮಹಲ್ ವೃತ್ತ, ನ್ಯಾಷನಲ್ ಕಾಲೇಜು ಮೇಲು ಸೇತುವೆ ಡೌನ್ ರ್ಯಾಂಪ್, ನ್ಯಾಷನಲ್ ಕಾಲೇಜು ವೃತ್ತ, ಪಂಪ ಮಹಾಕವಿ ರಸ್ತೆ, ನ್ಯಾಷನಲ್ ಕಾಲೇಜು ಮೈದಾನದ ಮೂಲಕ ಸಂಚರಿಸಬೇಕು.ಪ್ರೊ. ಶಿವಶಂಕರ ವೃತ್ತ, ಮಹಿಳಾ ಮಂಡಳಿ, ಪಿಎಂಕೆ ರಸ್ತೆ, ನ್ಯಾಷನಲ್ ಕಾಲೇಜು ಮೈದಾನದ ಮೂಲಕ ಹೋಗಬೇಕು. ಬುಲ್‌ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮ, ನ್ಯಾಷನಲ್ ಕಾಲೇಜು ಮೈದಾನ ಮಾರ್ಗದಲ್ಲಿ ಚಲಿಸಬೇಕು.

ಊಟ ಮಾಡೋಣ ಬನ್ನಿ...

ಬೆಳಿಗ್ಗೆ - ಪೊಂಗಲ್, ಚಟ್ನಿ, ಕಾಫಿ, ಚಹಾ.

ಮಧ್ಯಾಹ್ನ- ರೈಸ್‌ಬಾತ್, ವಾಂಗಿಬಾತ್, ಅನ್ನ-  ರಸಂ, ಮೊಸರನ್ನ, ಮೈಸೂರು ಪಾಕ್, ಖಾರಾ ಅಂಬೊಡೆ, ಉಪ್ಪಿನಕಾಯಿ.

ರಾತ್ರಿ- ಅನ್ನ ಸಾಂಬಾರ್, ಮೊಸರನ್ನ, ಪಾಯಸ, ಉಪ್ಪಿನಕಾಯಿ, ಹಪ್ಪಳ.

ಹಡ್ಸನ್ ವೃತ್ತದ ರಸ್ತೆಗಳಲ್ಲಿ ಪರ್ಯಾಯ ಮಾರ್ಗ ಬಳಸಿ

 ಸಾಹಿತ್ಯ ಸಮ್ಮೇಳನದ ಮೆರವಣಿಗೆಯ ಉದ್ಘಾಟನಾ ಸಮಾರಂಭ ಬಿಬಿಎಂಪಿ ಕಚೇರಿ ಮುಂಭಾಗ ಬೆಳಿಗ್ಗೆ ನಡೆಯಲಿದೆ. ಸಮಾರಂಭಕ್ಕೆ ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ಹಡ್ಸನ್ ವೃತ್ತ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ. ಆದ್ದರಿಂದ ಈ ಮಾರ್ಗಗಗಳಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry