ಸಾಹಿತ್ಯ ಸೇವೆಗೆ ಆದ್ಯತೆ ನೀಡಿ

7

ಸಾಹಿತ್ಯ ಸೇವೆಗೆ ಆದ್ಯತೆ ನೀಡಿ

Published:
Updated:

ರಾಜರಾಜೇಶ್ವರಿನಗರ: ವೈದ್ಯರು ಬಡವರು, ನೊಂದ ದುರ್ಬಲ ಹಾಗೂ ಕೈಲಾಗದ ಜನರ ಆರೋಗ್ಯ ಕಾಪಾಡುವುದರ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಸೇವೆಗೆ ಆದ್ಯತೆ ನೀಡುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಕರೆ ನೀಡಿದರು.ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಂಯುಕ್ತ ಅಶ್ರಯದಲ್ಲಿ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕನ್ನಡ ವೈದ್ಯ ಲೇಖಕರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸಿ.ಷಣ್ಮುಗಮ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ವೈದ್ಯ ಸಾಹಿತಿ ಡಾ.ವಸಂತ ಅ. ಕುಲಕರ್ಣಿ, ರಾಜರಾಜೇಶ್ವರಿ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಡಿ.ಎಲ್. ರಾಮಚಂದ್ರ, ಡೀನ್ ಡಾ.ಎಚ್.ರಂಗಪ್ಪ, ಪ್ರಾಂಶುಪಾಲರಾದ ಡಾ.ಉಷಾರಂಗಪ್ಪ, ಡಾ.ಸಿ.ಆರ್. ಚಂದ್ರಶೇಖರ್ ಡಾ.ರೋಷನ್‌ಕುಮಾರ್, ಡಾ.ಸುರೇಶ್, ಡಾ. ಶಶಿಕಲಾ, ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಡಾ.ಪ್ರಕಾಶ್ ಸಿ.ರಾವ್ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry