ಶುಕ್ರವಾರ, ಫೆಬ್ರವರಿ 26, 2021
30 °C

ಸಿಂಕ್ಫೀಲ್ಡ್‌ ಚೆಸ್‌; ಜಂಟಿ ಅಗ್ರಸ್ಥಾನಕ್ಕೇರಿದ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಕ್ಫೀಲ್ಡ್‌ ಚೆಸ್‌; ಜಂಟಿ ಅಗ್ರಸ್ಥಾನಕ್ಕೇರಿದ ಆನಂದ್‌

ಸೇಂಟ್‌ ಲೂಯಿಸ್‌, ಅಮೆರಿಕ (ಪಿಟಿಐ):  ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಇಲ್ಲಿ ನಡೆಯುತ್ತಿರುವ ಸಿಂಕ್ ಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.ಭಾನುವಾರ ನಡೆದ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರು ಫ್ರಾನ್ಸ್‌ನ ಆಟಗಾರ, ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಅವರನ್ನು ಮಣಿಸಿದರು.ಈ ಗೆಲುವಿನೊಂದಿಗೆ ಆನಂದ್‌  ಪೂರ್ಣ ಪಾಯಿಂಟ್‌ ಕಲೆ ಹಾಕಿದರಲ್ಲದೆ ಒಟ್ಟು ಪಾಯಿಂಟ್ಸ್‌ ಅನ್ನು 1.5ಕ್ಕೆ ಹೆಚ್ಚಿಸಿಕೊಂಡರು. ಮೊದಲ ಸುತ್ತಿನಲ್ಲಿ ಭಾರತದ ಆಟಗಾರ ಡ್ರಾ ಮಾಡಿಕೊಂಡಿ ದ್ದರು. ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಇನ್ನೂ ಏಳು ಸುತ್ತಿನ ಆಟ ಬಾಕಿ ಉಳಿದಿದೆ.ಮೊದಲ ಪಂದ್ಯದಲ್ಲಿ ಎದುರಾಳಿ ಜತೆ ಪಾಯಿಂಟ್‌ ಹಂಚಿಕೊಂಡಿದ್ದ ಆನಂದ್‌ ಅವರು ಲಾಗ್ರೇವ್‌ ವಿರುದ್ಧದ ಪಂದ್ಯದಲ್ಲಿ  ಶುರುವಿನಿಂದಲೇ ಎಚ್ಚರಿಕೆಯಿಂದ ಕಾಯಿಗಳನ್ನು ನಡೆಸಿದರಲ್ಲದೆ ಎದುರಾಳಿಯ ಮೇಲೆ ಒತ್ತಡ ಹೇರಿ ಸುಲಭವಾಗಿ ಪಂದ್ಯ ಗೆದ್ದರು.ಈ ವಿಭಾಗದ ಇತರ ಪಂದ್ಯಗಳಲ್ಲಿ ಅಮೆರಿಕದ ಹಿಕಾರು ನಕಮುರ, ನೆದರ್ಲೆಂಡ್ಸ್‌ನ ಅನಿಶ್‌ ಗಿರಿ ವಿರುದ್ಧವೂ, ಅರ್ಮೇನಿಯಾದ ಲೆವೊನ್‌ ಅರೋನಿಯನ್‌, ರಷ್ಯಾದ ಪೀಟರ್‌ ಸ್ವಿಡ್ಲರ್‌ ಮೇಲೂ ಗೆದ್ದರು.ಅಮೆರಿಕದ ಫ್ಯಾಬಿಯಾನೊ ಕರುವಾನ, ಬಲ್ಗೇರಿಯಾದ ವೆಸೆಲಿನ್‌ ಟೊಪಲೊವ್‌ ಎದುರೂ, ಚೀನಾದ ಡಿಂಗ್‌ ಲಿರೆನ್‌, ಅಮೆರಿಕದ ವೆಸ್ಲಿ ಸೊ ವಿರುದ್ಧವೂ ಡ್ರಾ ಮಾಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.