ಸಿಂಕ್ಫೀಲ್ಡ್ ಚೆಸ್: ಡ್ರಾ ಮಾಡಿಕೊಂಡ ಆನಂದ್

ಸೇಂಟ್ ಲೂಯಿಸ್, ಅಮೆರಿಕ (ಪಿಟಿಐ): ಚುರುಕಾಗಿ ಕಾಯಿಗಳನ್ನು ಮುನ್ನಡೆಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಸಿಂಕ್ಫೀಲ್ಡ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಆನಂದ್ ಅವರು ಚೀನಾದ ಡಿಂಗ್ ಲಿರೆನ್ ವಿರುದ್ಧ ಪಾಯಿಂಟ್ ಹಂಚಿಕೊಂಡರು. ಇದರೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು 2.5ಕ್ಕೆ ಹೆಚ್ಚಿಸಿಕೊಂಡಿರುವ ಆನಂದ್ ಪಾಯಿಂಟ್ಸ್ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬಲ್ಗೇರಿಯಾದ ವೆಸೆಲಿನ್ ಟೊಪಲೊವ್, ಅಮೆರಿಕದ ವೆಸ್ಲಿ ಸೊ ಮತ್ತು ಅರ್ಮೇನಿಯಾದ ಲೆವೊನ್ ಅರೋನಿಯನ್ ಅವರ ಖಾತೆಯಲ್ಲೂ ಇಷ್ಟೇ ಪಾಯಿಂಟ್ಸ್ ಇದೆ.
ಆನಂದ್ ಈ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದು, ಒಂದು ಪಂದ್ಯದಲ್ಲಿ ಗೆದ್ದಿದ್ದಾರೆ.
ಇನ್ನೂ ಐದು ಸುತ್ತುಗಳ ಆಟ ಬಾಕಿ ಇದ್ದು ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಎಲ್ಲಾ ಸುತ್ತುಗಳಲ್ಲೂ ಗೆಲುವು ಗಳಿಸಿದರೆ ಅವರ ಪ್ರಶಸ್ತಿಯ ಹಾದಿ ಸುಗಮವಾಗಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.