ಸಿಂಡಿಕೇಟ್ ಬ್ಯಾಂಕ್ ಲಾಭ ಕುಸಿತ

ಬೆಂಗಳೂರು: ಮೂರನೇ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕ್ನ ನಿವ್ವಳ ಲಾಭವು ₹ 119 ಕೋಟಿಗಳಷ್ಟಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿನ ₹ 305 ಕೋಟಿಗೆ ಹೋಲಿಸಿದರೆ, ಶೇ 139ರಷ್ಟು ಕಡಿಮೆಯಾಗಿದೆ.
ಬಡ್ಡಿದರದಲ್ಲಿಯ ಹೆಚ್ಚಳವೇ ನಿವ್ವಳ ಲಾಭ ಕುಸಿತಕ್ಕೆ ಪ್ರಮುಖ ಕಾರಣ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಶ್ರೀವಾಸ್ತವ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ಶೇ 3.60ರಿಂದ ಶೇ 4.61ಕ್ಕೆ ಏರಿಕೆ ಕಂಡಿರುವುದು ನಿವ್ವಳ ಲಾಭದಲ್ಲಿ ಇಳಿಕೆಯಾಗಲು ಮತ್ತೊಂದು ಕಾರಣ ಎಂದರು. ಕಳೆದ ತ್ರೈಮಾಸಿಕದಲ್ಲಿ ₹ 5,922 ಕೋಟಿಯಷ್ಟಿದ್ದ ಒಟ್ಟು ವರಮಾನ ಈ ಬಾರಿ ₹ 6,188 ಕೋಟಿಗೆ ಹೆಚ್ಚಿದೆ ಎಂದು ತಿಳಿಸಿದರು.
ಬ್ಯಾಂಕ್ನ ಜಾಗತಿಕ ವಹಿವಾಟು ₹ 4,38,099 ಕೋಟಿಗಳಿಂದ ₹ 4,64,087 ಕೋಟಿಗಳಿಗೆ (ಶೇ 6ರಷ್ಟು ಹೆಚ್ಚಳ) ಹೆಚ್ಚಳವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದೇಶಿ ವಹಿವಾಟು ₹ 3,72,660 ಕೋಟಿಗಳಿಂದ ₹ 3,91,664 ಕೋಟಿಗಳಿಗೆ (ಶೇ 5) ಏರಿಕೆ ಕಂಡಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಟಿ.ಕೆ. ಶ್ರೀವಾಸ್ತವ್ ತಿಳಿಸಿದರು.
ದೇಶದಾದ್ಯಂತ 137 ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ಸಮಗ್ರ ಗ್ರಾಮ ವಿಕಾಸ ಯೋಜನೆ ಅಡಿ 26 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಇವುಗಳ ಅಭಿವೃದ್ಧಿಗೆ ₹ 5.20 ಕೋಟಿ ಮೀಸಲಿಟ್ಟಿದೆ ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.