ಸಿಂಡಿಕೇಟ್ ಬ್ಯಾಂಕ್‌ನಿಂದ 3 ಹೊಸ ಸೇವೆ ಆರಂಭ

7

ಸಿಂಡಿಕೇಟ್ ಬ್ಯಾಂಕ್‌ನಿಂದ 3 ಹೊಸ ಸೇವೆ ಆರಂಭ

Published:
Updated:
ಸಿಂಡಿಕೇಟ್ ಬ್ಯಾಂಕ್‌ನಿಂದ 3 ಹೊಸ ಸೇವೆ ಆರಂಭ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ 88ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮೂರು ಹೊಸ ಸೇವೆಗಳನ್ನು ಪರಿಚಯಿಸಿದೆ. ಗರಿಷ್ಠ ಮಟ್ಟದ ವಹಿವಾಟು ನಡೆಸಬಹುದಾದ ಅಂತರರಾಷ್ಟ್ರೀಯ ವೀಸಾ ಗೋಲ್ಡ್ ಡೆಬಿಟ್ ಕಾರ್ಡ್, `ರೂ-ಪೇ ಕಿಸಾನ್ ಕಾರ್ಡ್~ ಮತ್ತು ವೇತನ ವರ್ಗದವರಿಗೆ ಬಹು ಬಗೆಯ ಉಳಿತಾಯ ಸೌಲಭ್ಯ ಇರುವ `ಸಿಂಡ್ ನವರತ್ನ~ ಸೇವೆಗಳಿಗೆ ಬ್ಯಾಂಕಿನ ಅಧ್ಯಕ್ಷ ಎಂ.ಜಿ ಸಾಂಘ್ವಿ ಶನಿವಾರ ಇಲ್ಲಿ ಚಾಲನೆ ನೀಡಿದರು.`ರೂ-ಪೇ ಕಿಸಾನ್ ಕಾರ್ಡ್~ಗಾಗಿ ಭಾರತೀಯ ಪಾವತಿ ಸಂಸ್ಥೆ (ಎನ್‌ಪಿಸಿಐ) ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕಾರ್ಡ್ ಬಳಸಿ ರೈತರು `ಎಟಿಎಂ~ನಿಂದ ನಗದು ಪಡೆಯಬಹುದು, ಇತರೆ ಹಣಕಾಸು ಸೇವೆಗಳನ್ನೂ ಪಡೆಯಬಹುದು ಎಂದರು.ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೇಶದಾದ್ಯಂತ 7 ಹೊಸ ಶಾಖೆಗಳನ್ನು ತೆರೆಯಲಾಗಿದೆ. ಇದರ ಜತೆಗೆ ಹಬ್ಬದ ಕೊಡುಗೆಯಾಗಿ ಗೃಹ, ವಾಹನ, ಚಿನ್ನದ ಸಾಲದ ಮೇಲಿನ ಬಡ್ಡಿದರ ತಗ್ಗಿಸಿದ್ದು, ಸ್ಪರ್ಧಾತ್ಮಕ ದರ ನಿಗದಿಪಡಿಸಲಾಗಿದೆ. ಪ್ರತಿ ಗ್ರಾಂ ಚಿನ್ನಕ್ಕೆ ್ಙ2100 ರಂತೆ ಸಾಲ ಲಭಿಸಲಿದೆ  ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry